More

    ತವರಿನಲ್ಲಿ ಪುಣೆಗೆ ಮೊದಲ ಜಯ, ದಬಾಂಗ್ ದೆಹಲಿ ಎದುರು ಸೋತ ಪವನ್ ಶೆರಾವತ್ ಪಡೆ

    ಪುಣೆ: ಅಸ್ಲಾಂ ಇನಾಮ್ದಾರ್ (10) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಆತಿಥೇಯ ಪುಣೇರಿ ಪಲ್ಟಾನ್ ತಂಡ ಬೆಂಗಾಲ್ ವಾರಿಯರ್ಸ್‌ ಎದುರು 49-19ರಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ಸ್‌ ಟೂರ್ನಿಯಲ್ಲಿ ಮೊದಲ ಸೋಲುಂಡರೆ, ಪುಣೇರಿ ತವರಿನಲ್ಲಿ ಮೊದಲ ಗೆಲುವು ದಾಖಲಿಸಿತು.

    ಛತ್ರಪತಿ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಪುಣೆ ಚರಣದಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಡಿೆಂಡರ್‌ಗಳು ಪ್ರಾಬಲ್ಯ ಸಾಧಿಸಿದರು. ಪುಣೆ ಮೊದಲಾರ್ಧದಲ್ಲಿ 20-12ರಿಂದ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಿದ ಪುಣೆ, ಬೆಂಗಾಲ್ ತಂಡವನ್ನು 2 ಬಾರಿ ಆಲೌಟ್ ಬಲೆಗೆ ಕೆಡವಿತು. ಅಸ್ಲಾಂಗೆ ಯುವ ರೈಡರ್‌ಮೋಹಿತ್ ಗೋಯತ್ (12), ಮೊಹಮದ್ರೇಜಾ ಚಿಯಾನೆಹ (6) ಹಾಗೂ ಗೌರವ್ ಖಾತ್ರಿ (5) ಉತ್ತಮ ಬೆಂಬಲ ನೀಡಿದರು. ಬೆಂಗಾಲ್ ಪರ ಮಣಿಂದರ್ ಸಿಂಗ್ (7) ಹೋರಾಟ ವ್ಯರ್ಥಗೊಂಡಿತು. ಉಭಯ ತಂಡಗಳು ಪಂದ್ಯದಲ್ಲಿ ಒಟ್ಟು 24 ಟ್ಯಾಕಲಿಂಗ್ ಅಂಕ ಕಲೆಹಾಕಿದವು.

    ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ 51-40 ಅಂಕಗಳಿಂದ ತೆಲುಗು ಟೈಟಾನ್ಸ್ ಎದುರು ಗೆಲುವು ಕಂಡಿತು. ಟೂರ್ನಿಯ ದುಬಾರಿ ಆಟಗಾರ ಪವನ್ ಶೆರಾವತ್ ಬಳಗಕ್ಕೆ ಸತತ 5ನೇ ಸೋಲು ಇದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts