More

    ‘ಸಲಗ’ನ ಡ್ಯುಯೆಟ್​ಗೆ ಪುನೀತ್​ ಮೆಚ್ಚುಗೆ …

    ಬೆಂಗಳೂರು: ‘ಸಲಗ’ ಚಿತ್ರದ ‘ಮಳೆಯೇ ಮಳೆಯೇ …’ ಲಿರಿಕಲ್ ವಿಡಿಯೋ‌ವನ್ನು ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅವರು ಶನಿವಾರ (ಸೆಪ್ಟೆಂಬರ್​ 5) ಬೆಳಿಗ್ಗೆ 11 ಗಂಟೆಗೆ A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಒಂದು ದಿನದ ಮುಂಚೆಯೇ ಹಾಡನ್ನು ಬಿಡುಗಡೆ ಮಾಡಿದ್ದಾರೆ ಪುನೀತ್​​.

    ಇದನ್ನೂ ಓದಿ: ‘ರಾಬರ್ಟ್​’ ಸುಂದರಿಯ ಫಸ್ಟ್​ ಲುಕ್​ ಕಣ್ತುಂಬಿಕೊಳ್ಳಲು ನಿಗದಿಯಾಯ್ತು ದಿನಾಂಕ

    ಶುಕ್ರವಾರ ಬೆಳಿಗ್ಗೆ ‘ಸಲಗ’ ಚಿತ್ರದ ನಿರ್ದೇಶಕ‌-ನಾಯಕ ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ ಶ್ರೀಕಾಂತ್ , ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ಸಂಜನಾ ಆನಂದ್ ಸೇರಿದಂತೆ ಚಿತ್ರತಂಡದ ಕೆಲವು ಸದಸ್ಯರು ಪುನೀತ್​ ರಾಜಕುಮಾರ್​ ಅವರ ಆಫೀಸಿಗೆ ಹೋಗಿ, ಅವರ ಕೈಯಿಂದ ‘ಮಳೆಯೇ ಮಳೆಯೇ …’ ಹಾಡನ್ನು ಬಿಡುಗಡೆ ಮಾಡಿಸಿದ್ದಾರೆ. ಹಾಡು ಕೇಳಿರುವ ಪುನೀತ್​, ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ‘ಸಲಗ’ ಚಿತ್ರದ ಚಿತ್ರೀಕರಣ ಲಾಕ್​ಡೌನ್​ಗೂ ಮುಂಚೆಯೇ ಮುಗಿದಿತ್ತು. ಚಿತ್ರವನ್ನು ಪೂರ್ತಿ ಎಡಿಟ್​ ಮೇಲೆ, ಒಂದು ಹಾಡು ಬೇಕು ಎಂದು ಚಿತ್ರತಂಡಕ್ಕೆ ಅನಿಸಿದ್ದರರಿಂದ ಸಂಗೀತ ನಿರ್ದೇಶಕ ಚರಣ್​ರಾಜ್​ ಅವರಿಂದ ಒಂದು ರೊಮ್ಯಾಂಟಿಕ್​ ಹಾಡನ್ನು ಕಂಪೋಸ್​ ಮಾಡಿಸಲಾಗಿತ್ತು.

    ‘ಮಳೆಯೇ ಮಳೆಯೇ ಅಂಬೆಗಾಲಿಡುತ್ತಾ ಸುರಿಯೇ…’ ಎಂದು ಸಾಗುವ ಈ ಹಾಡನ್ನು ಮಲೆನಾಡಿನ ಸುಂದರ ಪರಿಸರದಲ್ಲಿ, ಮಳೆಯ ನಡುವೆಯೇ ಚಿತ್ರೀಕರಿಸಲಾಗಿದೆ. ಸಕಲೇಶಪುರ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣವಾಗಿರುವ ಈ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಕೆಬಿಸಿ ತಂಡದ ಸದಸ್ಯರಿಗೆ ಕರೊನಾ; ಆತಂಕದಲ್ಲಿ ಬಿಗ್​ ಬಿ ಅಮಿತಾಬ್​

    ‘ಸಲಗ’ ಚಿತ್ರದಲ್ಲಿ ವಿಜಯ್​ ಮತ್ತು ಸಂಜನಾ ಜತೆಗೆ ಧನಂಜಯ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ಮಾಡಿದ್ದು, ಚರಣ್​ರಾಜ್​ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಸಿಸಿಬಿ ಕಚೇರಿಯಲ್ಲಿ ರಾಗಿಣಿ ವಿಚಾರಣೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts