More

    ಅಂಗಾಂಗ ದಾನ ದಿನಾಚರಣೆಗೆ ರಾಯಭಾರಿ ಆಗಿ: ಅಶ್ವಿನಿ ಪುನೀತ್ ರಾಜಕುಮಾರ್‌ಗೆ ಆಹ್ವಾನ

    ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸಲು ರಾಯಭಾರಿ ಆಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ.

    ವರನಟ ರಾಜ್‌ಕುಮಾರ್ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆ.3ರಂದು ಹಮ್ಮಿಕೊಂಡಿರುವ ಅಂಗಾಂಗ ದಾನ ದಿನಾಚರಣೆಗೆ ಇವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.

    ಇದನ್ನೂ ಓದಿ: ಹಠಾತ್​ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಅಪ್ಪು ನೆನಪಲ್ಲಿ AED ಸ್ಥಾಪನೆ!

    ರಾಜಕುಮಾರ್‌ನಂತೆ ಪುನೀತ್ ರಾಜಕುಮಾರ್ ಸಹ ತಮ್ಮ ಕಣ್ಣು ದಾನ ಮಾಡಿದ್ದರು. ಪುನೀತ್ ರಾಜಕುಮಾರ್ ಅವರ ಕಣ್ಣಗಳ ದಾನವು ರಾಜ್ಯಾದ್ಯಂತ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಇದರಿಂದಾಗಿ ಅಂಗಾಂಗ ದಾನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಟನ ಪ್ರೇರಣೆಯಿಂದ ಅನೇಕರು ಇಂದಿಗೂ ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಹೀಗಾಗಿ, ಅಶ್ವಿನಿ ಪುನೀತ್ ರಾಜಕುಮಾರ್‌ಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.

    ಇದನ್ನೂ ಓದಿ: ಉಚಿತ ಸಾರಿಗೆ ಬಸ್ ಪ್ರಯಾಣ; ಅಪ್ಪು ಸಮಾಧಿ ನೋಡಲು ಹರಿದು ಬಂದ ಮಹಿಳಾ ಅಭಿಮಾನಿಗಳ ದಂಡು!

    ಸಾವಿನ ಬಳಿಕ ಒಬ್ಬ ದಾನಿ 8 ಜನರಿಗೆ ಮರು ಜನ್ಮ ನೀಡಬಹುದು. ಅಲ್ಲದೆ, ಅಂಗಾಂಗ ದಾನದಿಂದ 50 ಜನರ ಜೀವ ಉಳಿಸಬಹುದಾಗಿದೆ. ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನ ರೂಪಿಸಲು ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.ಈ ದಿನಾಚರಣೆದಂದು ಅಂಗಾಂಗ ದಾನ ಮಾಡಿದ 150 ಕುಟುಂಬಗಳನ್ನು ಸನ್ಮಾನಿಲಾಗುತ್ತದೆ. ಅಂದಾಜು 3 ಲಕ್ಷ ಜನರು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ನಿಮ್ಹಾನ್ಸ್ ಸೇರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಹಿಂಪಡೆಯುವ ಕೇಂದ್ರ ಸ್ಥಾಪಿಸಲಾಗಿದೆ. ಉಚಿತ ಅಂಗಾಂಗ ಕಸಿ ಯೋಜನೆಯಡಿ 73 ರೋಗಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts