More

    ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ಚಿತ್ರದಲ್ಲಿ … ಪುನೀತ್-ದರ್ಶನ್ ಜತೆಯಾಗಿ ಕೆಲಸ ಮಾಡಿದ ಚಿತ್ರ ಇದು

    ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ಗಳಾದ ಪುನೀತ್ ಮತ್ತು ದರ್ಶನ್ ಜತೆಯಾಗಿ ಅಭಿನಯಿಸಿದ ಚಿತ್ರ ಒಂದೇ ಒಂದು. ಅದು ಪುನೀತ್ ಅಭಿನಯದ ‘ಅರಸು’ ಚಿತ್ರದಲ್ಲಿ ದರ್ಶನ್ ಕೆಲವೇ ನಿಮಿಷಗಳ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಇನ್ನೂ ಒಂದು ಚಿತ್ರದಲ್ಲಿ ಅವರಿಬ್ಬರು ಜತೆಯಾಗಿ ಕೆಲಸ ಮಾಡಿದ್ದರು ಗೊತ್ತಾ?

    ಹೌದು, ಪುನೀತ್ ಮತ್ತು ದರ್ಶನ್ ಇಬ್ಬರೂ ‘ಅರಸು’ ಅಲ್ಲದೆ ಇನ್ನೊಂದು ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಅದು ‘ಅರಸು’ ಚಿತ್ರಕ್ಕೆ ಬಹಳ ಮುಂಚೆಯೇ ಅವರು ಒಂದು ಚಿತ್ರದಲ್ಲಿ ಜತೆಯಾಗಿದ್ದರು. ಅದೇ ‘ಜನುಮದ ಜೋಡಿ’.

    ‘ಜನುಮದ ನೋಡಿ’ ನೋಡಿರುವವರಿಗೆ ಅಲ್ಲೆಲ್ಲೂ ಪುನೀತ್ ಮತ್ತು ದರ್ಶನ್ ಕಾಣುವುದೇ ಇಲ್ಲ. ಆದರೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಬಹುದು. ಶಿವರಾಜಕುಮಾರ್ ಅಭಿನಯದ ‘ಜನುಮದ ಜೋಡಿ’ ಚಿತ್ರವನ್ನು ನಿರ್ಮಿಸಿದ್ದು ಪಾರ್ವತಮ್ಮ ರಾಜಕುಮಾರ್. ಈ ಚಿತ್ರದ ಪ್ರೊಡಕ್ಷನ್ ಮೇಲ್ವಿಚಾರಕರಾಗಿ ಪುನೀತ್ ಕೆಲಸ ಮಾಡಿದ್ದರು. ಇನ್ನು ದರ್ಶನ್ ಈ ಚಿತ್ರದಲ್ಲಿ ಖ್ಯಾತ ಸಹಾಯಕ ಬಿ.ಸಿ. ಗೌರಿಶಂಕರ್ ಅವರಿಗೆ ಸಹಾಯಕರಾಗಿದ್ದರು. ಪುನೀತ್ ಮತ್ತು ದರ್ಶನ್ ಇಬ್ಬರ ಹೆಸರುಗಳನ್ನೂ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ನೋಡಬಹುದಾಗಿದೆ.

    ಕನ್ನಡ ಚಿತ್ರರಂಗದ ಈಗಿನ ಸೂಪರ್​ಸ್ಟಾರ್​ಗಳು ಒಂದಾನೊಂದು ಕಾಲದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು ಎಂಬ ಉದಾಹರಣೆಯಾಗಿ, ‘ಕಾರ್ಮಿಕರ ದಿನಾಚರಣೆ’ಯ ಅಂಗವಾಗಿ ಈ ಚಿತ್ರದ ಟೈಟಲ್ ಕಾರ್ಡ್‌ನ ಫೋಟೋಗಳು ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.

    ಅವರನ್ನ ನೋಡೋಕೆ ಇಷ್ಟ ಇರಲಿಲ್ಲ … ಮನಸ್ಸು ಬಿಚ್ಚಿ ಮಾತನಾಡಿದ ಅಮಿತಾಭ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts