More

    ಅರವಿಂದ ಕೇಜ್ರಿವಾಲ ಅವರನ್ನು ಭಯೋತ್ಪಾದಕ ಎಂದು ನಾನು ಹೇಳೇ ಇಲ್ಲ; ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಯೂ ಟರ್ನ್​!

    ಪುಣೆ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರನ್ನು ಭಯೋತ್ಪಾದಕ ಎಂದು ನಾನು ಹೇಳೇ ಇಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಹೇಳಿದ್ದಾರೆ.

    “ಅರವಿಂದ ಕೇಜ್ರಿವಾಲ​ ಅವರು ಅಮಾಯಕರಂತೆ ಮುಖ ಮಾಡಿಕೊಂಡಿರುತ್ತಾರೆ. ನಾನು ಭಯೋತ್ಪಾದಕನಾ? ಎಂದು ಕೇಳುತ್ತಾರೆ. ಆದರೆ ಅವರು ಭಯೋತ್ಪಾದಕರೇ. ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಈ ಮೊದಲು ಪ್ರಕಾಶ್​ ಜಾವಡೇಕರ್​ ಹೇಳಿದ್ದರು.

    ಕೇಜ್ರಿವಾಲ್​ ಅವರು ತಮ್ಮನ್ನು ತಾವು ಅರಾಜಕತಾವಾದಿ ಎಂದು ಕರೆದುಕೊಳ್ಳುತ್ತಾರೆ. ಹಾಗಾದರೆ ಅರಾಜಕತಾವಾದಿಯಾದರೆ ಭಯೋತ್ಪಾದಕರಿಗೂ ನಿಮಗೂ ವ್ಯತ್ಯಾಸವೇನು? ನೀವೂ ಭಯೋತ್ಪಾದಕರೇ ಎಂದು ಜಾವಡೇಕರ್​ ಜರಿದಿದ್ದರು.

    ಜನವರಿ 25 ರಂದು ಚುನಾವಣೆ ಪ್ರಚಾರದಲ್ಲಿ ಕೇಜ್ರಿವಾಲ ವಿರುದ್ಧ ಮೊದಲು ಮಾತನಾಡಿದ್ದು ಬಿಜೆಪಿ ಸಂಸದ ಪರ್ವೇಶ್​ ಶರ್ಮಾ. ​ಕೇಜ್ರಿವಾಲ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಶಾಹಿನಾ ಬಾಗ್​ ತರಹದ ಜನರು ಬೀದಿಯಲ್ಲಿ ತುಂಬಿಕೊಳ್ಳುತ್ತಾರೆ ಎಂದಿದ್ದರು.

    ದೆಹಲಿ ಚುನಾವಣೆ ನಡೆದ ಮರುದಿನ ಬಿಜೆಪಿ ಶಾಸಕ ಒ.ಪಿ. ಶರ್ಮಾ, “ಅರವಿಂದ ಕೇಜ್ರಿವಾಲ ಅವರು ಭ್ರಷ್ಟರು. ಅವರಿಗೆ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಇದೆ. ಪಾಕಿಸ್ತಾನದ ರಾಯಭಾರಿ ತರಹ ಮಾತನಾಡುತ್ತಾರೆ. ಭಾರತೀಯ ಸೇನೆಯ ಬಗ್ಗೆ ಪ್ರಶ್ನಿಸುತ್ತಾರೆ ಮತ್ತು ತುಕ್ಡೇ ಗ್ಯಾಂಗ್​ನ್ನು ಬೆಂಬಲಿಸುತ್ತಾರೆ” ಎಂದಿದ್ದರು.

    ಚುನಾವಣೆ ಪ್ರಚಾರದಲ್ಲಿ ಬಿಜೆಪಿ ನಾಯಕರು ದೆಹಲಿ ಮುಖ್ಯಮಂತ್ರಿ ಮೇಲೆ ಮುರಿದು ಬಿದ್ದಿದ್ದರು. ದೇಶದ್ರೋಹಿಗಳನ್ನು ಗುಂಡು ಹಾರಿಸಬೇಕು ಎಂದೆಲ್ಲ ಹೇಳಿಕೆ ನೀಡಿದ್ದರು. ಆದ್ದರಿಂದ ಬಿಜೆಪಿಗೆ ಸೋಲಾಗಿದೆ ಎಂಬುದು ರಾಜಕೀಯ ಲೆಕ್ಕಾಚಾರದ ಮಾತುಗಳು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts