More

    ನೋ ವ್ಯಾಕ್ಸಿನ್, ನೋ ಟ್ರೋಫಿ! ಜೋಕೊವಿಕ್ ಕಾಲೆಳೆದ ಪುಣೆ ಪೊಲೀಸರು

    ಪುಣೆ: ಲಸಿಕೆ ಹಾಕಿಸಿಕೊಳ್ಳದೆ ಆಸ್ಟ್ರೇಲಿಯಾ ಪ್ರವೇಶಿಸಲು ಯತ್ನಿಸಿ ಗಡಿಪಾರಾದ ವಿಶ್ವ ನಂ. 1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾದರೆ, ಲಸಿಕೆ ಹಾಕಿಸಿಕೊಂಡು ಟೂರ್ನಿಯಲ್ಲಿ ಆಡಿದ ಸ್ಪೇನ್ ತಾರೆ ರಾಫೆಲ್ ನಡಾಲ್ 21ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡು ಬೀಗಿದರು. ಈ ಹಿನ್ನೆಲೆಯಲ್ಲಿ ಪುಣೆ ಪೊಲೀಸರು, ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಇದನ್ನೇ ಅಸವನ್ನಾಗಿ ಬಳಸಿಕೊಂಡಿದ್ದಾರೆ.

    ‘ನೋ ವ್ಯಾಕ್ಸಿನ್, ನೋ ಟ್ರೋಫಿ. ಇಂದೇ ಲಸಿಕೆ ತೆಗೆದುಕೊಳ್ಳಿ’ ಎಂಬ ಟ್ವೀಟ್‌ನೊಂದಿಗೆ ಪುಣೆ ಪೊಲೀಸರು ಸೋಮವಾರ ಜೋಕೊವಿಕ್ ಕಾಲೆಳೆದಿದ್ದಾರೆ. ಜತೆಗೆ ನಡಾಲ್-ಜೋಕೋ ಜತೆಗಿರುವ ಚಿತ್ರವನ್ನೂ ಟ್ವೀಟಿಸಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಅನೇಕರು ಲಸಿಕೆಯ ಮಹತ್ವವನ್ನು ಸಾರಲು ಈ ಬೆಳವಣಿಗೆಯನ್ನೇ ಉದಾಹರಣೆ ನೀಡಿದ್ದಾರೆ. ಇದರ ಜತೆಯಲ್ಲೇ ಲಸಿಕೆ ಹಾಕಿಸಿಕೊಳ್ಳದ ಜೋಕೊವಿಕ್ ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗಿದ್ದಾರೆ.

    ‘ಜೋಕೊವಿಕ್ ಇನ್ನಾದರೂ ಲಸಿಕೆಯ ಮಹತ್ವವನ್ನು ಅರಿಯಲಿ. ಲಸಿಕೆ ಹಾಕಿಸಿಕೊಂಡರಷ್ಟೇ 21 ಗ್ರಾಂಡ್ ಸ್ಲಾಂ ಗೆಲ್ಲಲು ಸಾಧ್ಯ. ಲಸಿಕೆ ಹಾಕಿಸಿಕೊಂಡಿದ್ದರಿಂದ ನಡಾಲ್ ದುರ್ಬಲರಾಗಲಿಲ್ಲ’ ಎಂದು ಕೆಲವರು ಟ್ವೀಟಿಸಿದ್ದಾರೆ. ನಡಾಲ್ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರಷ್ಯಾದ ಡೆನಿಲ್ ಮೆಡ್ವೆಡೇವ್ ವಿರುದ್ಧ ಮೊದಲ 2 ಸೆಟ್ ಸೋತರೂ, ನಂತರದ 3 ಸೆಟ್‌ಗಳಲ್ಲಿ ತಿರುಗೇಟು ನೀಡುವ ಮೂಲಕ 21 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ವಿಶ್ವದ ಮೊಟ್ಟಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು.

    ಆಸ್ಟ್ರೇಲಿಯನ್ ಓಪನ್ ಗೆದ್ದ ನಡಾಲ್; ಸ್ಪೇನ್ ದಿಗ್ಗಜನಿಗೆ 21ನೇ ಗ್ರಾಂಡ್ ಸ್ಲಾಂ ಕಿರೀಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts