More

    ಕಾರಿನ ಬಾನೆಟ್​ ಏರಿ ಮದುವೆ ಮಂಟಪಕ್ಕೆ ಬಂದ ವಧುವಿಗೆ ಕಾದಿತ್ತು ಆಘಾತ..!

    ಪುಣೆ: ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂತೆ ಮದುವೆ ಮಾಡಿಕೊಳ್ಳುವುದು ಪ್ರತಿಯೊಬ್ಬ ವಧುವಿನ ಕನಸು. ಹೀಗಾಗಿ ಕೆಲವರು ಪ್ರೀ ವೆಡ್ಡಿಂಗ್​ ಮತ್ತು ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ಅಥವಾ ವಿಡಿಯೋಶೂಟ್​ ಮೊರೆ ಹೋಗುತ್ತಾರೆ. ವಿಭಿನ್ನ ಪರಿಕಲ್ಪನೆಯಲ್ಲಿ ಶೂಟ್​ ಮಾಡಿಸುತ್ತಾರೆ. ಆದರೆ, ಕೆಲವೊಮ್ಮೆ ಮದುವೆಯ ಪರಿಕಲ್ಪನೆಗಳೇ ಸಂಕಷ್ಟವನ್ನು ತಂದೊಡ್ಡುತ್ತವೆ.

    ಹೌದು. ಇದಕ್ಕೆ ತಾಜಾ ಉದಾಹರಣೆಯಂತೆ ಪುಣೆಯಲ್ಲಿ ಘಟನೆಯೊಂದು ನಡೆದಿದೆ. ವಧು ಮತ್ತು ವರ ಅದ್ಧೂರಿಯಾಗಿ ಮದುವೆ ಮಂಟಪಕ್ಕೆ ಬಂದಿದ್ದಾರೆ. ಹೀಗಿ ಬರುವಾಗ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

    23 ವರ್ಷ ವಧು ಮಂಗಳವಾರ ಮದುವೆ ಮಂಟಪಕ್ಕೆ ವಿನೂತನವಾಗಿ ಎಂಟ್ರಿ ಕೊಟ್ಟರು. ಮನೆಯಿಂದ ಎಸ್​ಯುವಿ ಕಾರಿನ ಬಾನೆಟ್​ ಮೇಲೆ ಕುಳಿತು ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಅದನ್ನು ವಿಡಿಯೋಗ್ರಾಫರ್​ ಬೈಕ್​ ಮೇಲೆ ಕುಳಿತು ಚಿತ್ರೀಕರಿಸಿದ್ದಾರೆ. ಎಲ್ಲವೂ ಆರಾಮಾಗಿಯೇ ನಡೆದಿದೆ. ಆದರೆ, ಮದುವೆ ಬಳಿಕ ವಧುವಿನ ಕುಟುಂಬಕ್ಕೆ ಶಾಕ್​ ಒಂದು ಎದುರಾಗಿದೆ.

    ವಧು ಕಾರಿನ ಮೇಲೆ ಬರುವ ವಿಡಿಯೋ ವೈರಲ್​ ಆದ ಬಳಿಕ ಪುಣೆ ಪೊಲೀಸರು ವಧುವಿನ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್​ ಕಳುಹಿಸಿದ್ದಾರೆ. ವಧು ಮಾತ್ರವಲ್ಲದೆ, ವಿಡಿಯೋಗ್ರಾಫರ್​, ಮತ್ತು ಕಾರು ಚಾಲಕನ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕೇಸು ದಾಖಲಾಗಿದೆ. ಮದುವೆ ಆಗಿರಲಿ ಅಥವಾ ಯಾವುದೇ ಸಮಾರಂಭವಾಗಿರಲಿ ಯಾರು ಕೂಡ ಸಂಚಾರ ನಿಯಮ ಉಲ್ಲಂಘಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

    ಒಮ್ಮೆ ನಿದ್ರೆಗೆ ಜಾರಿದ್ರೆ ಮತ್ತೆ ಏಳಲು ಬೇಕು 25 ದಿನ! ಆಧುನಿಕ ಕುಂಭಕರ್ಣನ ದಿನಚರಿ ಕೇಳಿದ್ರೆ ಬೆರಗಾಗ್ತೀರಿ

    ಜೈಲಲ್ಲಿ ಸಿಗಲಿದೆ ಬಿಸಿ ಬಿಸಿ ಚಿಕನ್ ಖಾದ್ಯ; ಹೇಗಾಗಲಿವೆ ಗೊತ್ತಾ ಮಹಾರಾಷ್ಟ್ರದ ಜೈಲುಗಳು?

    ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts