More

    ಜಿಂಬಾಬ್ವೆ ಆಲ್ರೌಂಡರ್​ ಮನವಿಗೆ ಸ್ಪಂದಿಸಿದ ಪೂಮಾ ಕ್ರಿಕೆಟ್​, ತಂಡಕ್ಕೆ ಕಡೆಗೂ ದಕ್ಕಿದ ಪ್ರಾಯೋಜಕರು

    ಹರಾರೆ: ತಂಡ ಸಂಕಷ್ಟದಲ್ಲಿದ್ದು, ಯಾರಾದರೂ ಪ್ರಾಯೋಜಕತ್ವ ವಹಿಸಿಕೊಳ್ಳಿ ಎಂದ ಜಿಂಬಾಬ್ವೆ ತಂಡದ ಆಲ್ರೌಂಡರ್​ ರ್ಯಾನ್​ ರ್ಬಲ್​ ಟ್ವಿಟನ್​ ಮೂಲಕ ಮಾಡಿಕೊಂಡಿದ್ದ ಮನವಿಗೆ ಪೂಮಾ ಸಂಸ್ಥೆ ಸ್ಪಂದಿಸಿದೆ. 27 ವರ್ಷದ ರ್ಯಾನ್​ ಬರ್ಲ್​​ ಶನಿವಾರವಷ್ಟೇ ತಂಡಕ್ಕೆ ಪ್ರಾಯೋಜಕತ್ವದ ಅಗತ್ಯವಿದ್ದು, ಆಟಗಾರರೂ ಸೂಕ್ತ ಶೂ ಹಾಗೂ ಗ್ಲೌಸ್​ಗೂ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ತಂಡಕ್ಕೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿರುವ ಪೂಮಾ ಸಂಸ್ಥೆಗೆ ಧನ್ಯವಾದ ಅಪಿರ್ಸಿದ್ದಾರೆ.

    ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಪೊಲೀಸ್ ಬಲೆಗೆ ಬಿದ್ದ ಎರಡು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್

    ನಾನೀಗ ಪೂಮಾ ಕ್ರಿಕೆಟ್​ ತಂಡ ಸೇರಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ಬರ್ಲ್​​ ಹೇಳಿಕೊಂಡಿದ್ದಾರೆ. ನನ್ನ ಮನವಿಗೆ ಕೇವಲ 24 ಗಂಟೆಗಳಲ್ಲಿ ಸ್ಪಂದಿಸಿದ ಪೂಮಾ ಸಂಸ್ಥೆಗೆ ಅಭಾರಿಯಾಗಿದ್ದೇನೆ ಎಂದು ಎಡಗೈ ಬ್ಯಾಟ್ಸ್​ಮನ್​ ತಿಳಿಸಿದ್ದಾರೆ. ಇದಕ್ಕೂ ಮೊದಲು ಬರ್ಲ್​ ಅವರ ಟ್ವೀಟ್​ಗೆ ಪ್ರತಿಕ್ರಿಯಸಿದ್ದ ಪೂಮಾ ಕ್ರಿಕೆಟ್​, ಇದೀಗ ಹಳೆಯನ್ನು ತೊಡೆದು ಹಾಕುವ ಸಮಯ ಬಂದಿದೆ ಎಂದು ಹೇಳಿತ್ತು.

    ಇದನ್ನೂ ಓದಿ: ಶ್ರೀಲಂಕಾ – ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಕಾಡಿದ ಕೋವಿಡ್​-19

    27 ವರ್ಷದ ರ್ಯಾನ್​ ಬರ್ಲ್​​ ಇದುವರೆಗೂ 3 ಟೆಸ್ಟ್​, 18 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ. ತಂಡದ ಇಂಥ ದುಸ್ಥಿತಿಯನ್ನು ಕಂಡು ಕಣ್ಣೀರು ಹಾಕಿದ್ದ ಆಲ್ರೌಂಡರ್​ ರ್ಯಾನ್​ ಬರ್ಲ್​​, ಆಟಗಾರರು ಉತ್ತಮ ಶೂಗೂ ಪರಿತಪಿಸುವಂತಾಗಿದೆ ಎಂದು ಹಳೇ ಶೂಗಳಿದ್ದ ಫೋಟೋಗಳನ್ನು ಟ್ವೀಟ್​ ಮಾಡಿದ್ದರು.

    ಇದನ್ನೂ ಓದಿ:ನೆಚ್ಚಿನ ತಂಡ ಗೆದ್ದ ಸಂಭ್ರಮಾಚರಣೆ ವೇಳೆ ಪ್ರಾಣತೆತ್ತ ಫುಟ್​ಬಾಲ್​ ಅಭಿಮಾನಿ,

    ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್​ನ ಶ್ರೇಷ್ಠ ತಂಡಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಜಿಂಬಾಬ್ವೆ ತಂಡ ಇಂದು ಹೀನಾಯ ಸ್ಥಿತಿ ತಲುಪಿದೆ. ಸ್ಥಳಿಯ ಕ್ರಿಕೆಟ್​ ಆಡಳಿತ ಹಾಗೂ ದೇಶದ ರಾಜತಾಂತ್ರಿಕ ಬಿಕ್ಕಟ್ಟೇ ಜಿಂಬಾಬ್ವೆ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಂಬಾಬ್ವೆ ತಂಡ ಸಕ್ರಿಯವಾಗಿದ್ದರೂ ಸೂಕ್ತ ಪ್ರಾಯೋಜಕತ್ವ ಕೊರತೆಯಿಂದ ತತ್ತರಿಸಿದೆ. ಎಷ್ಟೊ ವರ್ಷಗಳಿಂದಲೂ ಪ್ರಾಯೋಜಕರಿಲ್ಲದೇ ಜಿಂಬಾಬ್ವೆ ಕ್ರಿಕೆಟ್​ ಮಂಡಳಿಯೇ ಸ್ವತಃ ಖಚಿರ್ನಿಂದ ತಂಡವನ್ನು ನಿಭಾಯಿಸುತ್ತಿದೆ.

    ಯಾರಾದರೂ ತಂಡಕ್ಕೆ ಪ್ರಾಯೋಜಕತ್ವ ನೀಡಿ ಎಂದು ಅಳಲು ತೋಡಿಕೊಂಡ ಜಿಂಬಾಬ್ವೆ ಆಲ್ರೌಂಡರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts