More

    VIDEO: ಪುಲ್ವಾಮಾ ಮಾದರಿ ದಾಳಿಯ ಕಾರು ಸ್ಪೋಟಗೊಂಡಿದ್ದು ಹೀಗೆ..

    ಜಮ್ಮುಕಾಶ್ಮೀರದಲ್ಲಿ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿಗೆ ಉಗ್ರರು ಸಂಚು ರೂಪಿಸಿದ ಮಾಹಿತಿ ಪೊಲೀಸರಿಗೆ ಮೊದಲೇ ಲಭ್ಯವಾದ ಕಾರಣ ಸಂಭಾವ್ಯ ದಾಳಿಯೊಂದು ವಿಫಲವಾಗಿದೆ. ಸಿಆರ್​ಪಿಎಫ್​ ಮತ್ತು ಸೇನಾ ಪಡೆಗಳಿಗೆ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಪೊಲೀಸರು, ಬಳಿಕ ಐಇಡಿ ಹೊಂದಿದ್ದ ಆ ಕಾರನ್ನು ಅದಿದ್ದ ಸ್ಥಳದಲ್ಲೇ ಸ್ಫೋಟಿಸಿ ಸಂಭಾವ್ಯ ಅಪಾಯವನ್ನು ದೂರ ಮಾಡಿದರು. ಬಳಿಕ ಕಾರಿನ ಸ್ಪೋಟ ವಿಡಿಯೋವನ್ನು ಪ್ರಕಟಿಸಿದ್ದಾರೆ.

    ಇದನ್ನೂ ಓದಿ:  ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ

    ಶ್ರೀನಗರ: 2019ರ ಫೆ.14ರಂದು ಉಗ್ರರು ನಡೆಸಿದ್ದ ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿಯನ್ನು ಭದ್ರತಾ ಪಡೆ ಸಿಬ್ಬಂದಿ ಬುಧವಾರ ರಾತ್ರಿ ವಿಫಲಗೊಳಿಸಿದ್ದಾರೆ. ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ರಾಜಪೋರಾದ ಅವಿಗುಂಡ್​ ಬಳಿಯ ಚೆಕ್​ಪೋಸ್ಟ್​ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 20 ಕೆ.ಜಿ. ಸುಧಾರಿತ ಸ್ಫೋಟ ಇರುವುದು ಪತ್ತೆಯಾಯಿತು. ವಶಕ್ಕೆ ಪಡೆಯುವಷ್ಟರಲ್ಲಿ ವಾಹನದ ಚಾಲಕ ಗುಂಡಿನ ದಾಳಿ ನಡೆಸುತ್ತಾ, ಕತ್ತಲಲ್ಲಿ ಪರಾರಿಯಾದ ಎನ್ನಲಾಗಿದೆ. (ವಿವರ ಓದಿಗೆ ಈ ಪ್ಯಾರಾದ ಮೇಲಿರುವ ಶೀರ್ಷಿಕೆಯನ್ನು ಕ್ಲಿಕ್ ಮಾಡಿ)

    ಇದನ್ನೂ ಓದಿ: ಪುಲ್ವಾಮಾ ಸ್ಫೋಟ ಪ್ರಕರಣದಲ್ಲಿ ಉಗ್ರರಿಗೆ ಬಾಂಬ್​ ತಯಾರಿಸಲು ನೆರವು ನೀಡಿದ್ದ ತಂದೆ, ಮಗಳು ಬಂಧನ

    ಪುಲ್ವಾಮಾ: ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬರ್​ಗಳಿಂದಾಗಿ 40 ಜನ ಸಿಆರ್​ಪಿಎಫ್​ ಯೋಧರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತಂದೆ ಮತ್ತು ಮಗಳನ್ನು ಮಾರ್ಚ್ 3ರಂದು ಬಂಧಿಸಿದೆ. ಕಳೆದ ವಾರ ಪುಲ್ವಾಮಾ ಹಜಿಬಲ್​ ಪ್ರದೇಶದವನಾದ ಶಕೀರ್ ಬಶೀರ್ ಮ್ಯಾಗ್ರೆ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳನ್ನು ಬಂಧಿಸಲಾಗಿದೆ. ಇವರಿಬ್ಬರು ಉಗ್ರರಿಗೆ ಆಶ್ರಯ ನೀಡಿದ್ದೂ ಅಲ್ಲದೆ, ಬಾಂಬ್​ ತಯಾರಿಸಲು ಸಹಾಯ ಮಾಡಿದ್ದರು.(ವಿವರ ಓದಿಗೆ ಈ ಪ್ಯಾರಾದ ಮೇಲಿರುವ ಶೀರ್ಷಿಕೆಯನ್ನು ಕ್ಲಿಕ್ ಮಾಡಿ)

    ಈ ಭಾರತೀಯ ಮಹಿಳೆಯರು ಇದುವರೆಗೂ ಚಿನ್ನಾಭರಣ ಖರೀದಿಸಿಯೇ ಇಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts