More

    ಟೆಸ್ಟ್ ತಂಡದಿಂದ ಕೈ ಬಿಟ್ಟ ಆಯ್ಕೆಗಾರರಿಗೆ ತಿರುಗೇಟು ನೀಡಿದ ಪೂಜಾರ

    ಬೆಂಗಳೂರು: ಭಾರತ ಟೆಸ್ಟ್ ತಂಡದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾ ಆಯ್ಕೆಗಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ತೋರಿದ ನೀರಸ ಬ್ಯಾಟಿಂಗ್ ನಿರ್ವಹಣೆಯ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಜುಲೈ 12 ರಂದು ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕಡೆಗಣಿಸಲ್ಪಟ್ಟ ಪೂಜಾರ. ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ಪರ ಕಣಕ್ಕಿಳಿಯಲು ನಿರ್ಧರಿಸಿದರು.

    ದುಲೀಪ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಎನಿಸಿರುವ ಪಶ್ಚಿಮ ವಲಯ ತಂಡ ಸೆಮಿೈನಲ್‌ಗೆ ನೇರ ಅರ್ಹತೆ ಪಡೆದಿತ್ತು. ಬೆಂಗಳೂರಿನ ಹೊರವಲಯ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಸೆಮಿೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ಹಾಗೂ ಕೇಂದ್ರ ವಲಯ ತಂಡಗಳು ಪ್ರಶಸ್ತಿ ಸುತ್ತಿಗೆ ಸೆಣಸಾಡುತ್ತಿವೆ. ಶನಿವಾರ ಪಂದ್ಯದ ಅಂತಿಮ ದಿನವಾಗಿದೆ.

    ಪಶ್ಚಿಮ ವಲಯ ಪರ ಮೊದಲ ಇನಿಂಗ್ಸ್‌ನಲ್ಲಿ 107 ಎಸೆತ ಎದುರಿಸಿ 28 ರನ್‌ಗಳಿಸಿದ ಪೂಜಾರ. ಎರಡನೇ ಇನಿಂಗ್ಸ್‌ನಲ್ಲಿ 278 ಎಸೆತಗಳಲ್ಲಿ 133 ರನ್ ಪೇರಿಸುವ ಮೂಲಕ ರಾಷ್ಟ್ರೀಯ ಆಯ್ಕೆಗಾರರ ಕಡೆಗಣನೆಗೆ ಬ್ಯಾಟ್ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಸತತ ಆರು ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿದ 35 ವರ್ಷದ ಪೂಜಾರ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 60ನೇ ಶತಕ ಪೂರೈಸಿದರು. ದಿನದಂತ್ಯದಲ್ಲಿ ರನೌಟ್‌ಗೆ ಬಲಿಯಾದರು.ಪೂಜಾರ ಅವರನ್ನು ರಾಷ್ಟ್ರೀಯ ತಂಡದಿಂದ ಕೈ ಬಿಟ್ಟಿರುವುದು ಇದು ಎರಡನೇ ಬಾರಿ. 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ 1-2 ಅಂತರದಿಂದ ಸೋತ ಬಳಿಕ ರಹಾನೆ ಹಾಗೂ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು.

    ಪಶ್ಚಿಮ ವಲಯ: 220 ಹಾಗೂ 92 ಓವರ್‌ಗಳಲ್ಲಿ 9 ವಿಕೆಟ್‌ಗೆ 292 (ಪೂಜಾರ 133, ಪಟೇಲ್ 27, ಅತಿತ್ 9, ಡಿ. ಜಡೇಜಾ 9, ಅರ್ಜಾನ್ 1, ಸೌರಭ್ 79ಕ್ಕೆ4, ಸರ‌್ಯಶ್ ಜೈನ್ 56ಕ್ಕೆ 3).
    ಕೇಂದ್ರ ವಲಯ: 31.3 ಓವರ್‌ಗಳಲ್ಲಿ 128 (ರಿಂಕು ಸಿಂಗ್ 48, ಧ್ರುವ್ ಜುರೆಲ್ 46, ಸೌರಭ್ 12, ಅರ್ಜಾನ್ 74ಕ್ಕೆ5, ಅತಿತ್ ಶೇಠ್ 27ಕ್ಕೆ3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts