More

    ಪಾಕಿಸ್ತಾನದ ವಿಶ್ವಕಪ್ ಕನಸು ಬಹುತೇಕ ಭಗ್ನ: ಸೆಮೀಸ್ ಹಾದಿ ದುರ್ಗಮ

    ಚೆನ್ನೈ: ಬ್ಯಾಟಿಂಗ್,ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ವೈಲ್ಯ ಅನುಭವಿಸಿದ ಪಾಕಿಸ್ತಾನ ತಂಡ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ 3ನೇ ಸೋಲು ಅನುಭವಿಸಿದೆ. ಆತಿಥೇಯ ಭಾರತ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಸಂಪೂರ್ಣವಾಗಿ ಲಯ ತಪ್ಪಿರುವ ಬಾಬರ್ ಅಜಮ್ ಪಡೆಗೆ ಈಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಭೀತಿ ಎದುರಾಗಿದೆ.

    ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ 1992ರ ಚಾಂಪಿಯನ್ ಪಾಕಿಸ್ತಾನ ತಂಡದ ಸೆಮೀಸ್ ಹಾದಿ ಕಠಿಣ ಎನಿಸಿದೆ. ಆಡಿರುವ 5 ಪಂದ್ಯಗಳಲ್ಲಿ 2 ಗೆಲವು, 3 ಸೋಲು ಕಂಡಿರುವ ಬಾಬರ್ ಪಡೆ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಉಳಿದಿರುವ ಎಲ್ಲ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 12 ಅಂಕ ಕಲೆಹಾಕಲಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದು ಅಥವಾ ಸೋಲು ಕಂಡರೆ ಸೆಮೀಸ್ ಬಾಗಿಲು ಮುಚ್ಚಿಹೋಗಲಿದೆ. ಇದಲ್ಲದೆ, ಪಾಕ್ ಸೆಮೀಸ್ ರೇಸ್‌ನಲ್ಲಿ ಉಳಿಯಲು ಜಯದ ಜತೆಗೆ ಇತರ ತಂಡಗಳ ಲಿತಾಂಶ ಮತ್ತು ರನ್‌ರೇಟ್ ಕೂಡ ವರದಾನ ಆಗಬೇಕಿದೆ. ಪಾಕಿಸ್ತಾನ ಮುಂದಿನ 4 ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ತನಗಿಂತ ಮೇಲಿರುವ 2 ತಂಡಗಳನ್ನು ಎದುರಿಸಲಿದೆ. ರನ್‌ಪ್ರವಾಹ ಹರಿಸುತ್ತಿರುವ ದಕ್ಷಿಣ ಆಫ್ರಿಕಾ (ಅ.27, ಚೆನ್ನೈ), ಬಾಂಗ್ಲಾದೇಶ (ಅ.31, ಕೋಲ್ಕತ), ಹಾಲಿ ರನ್ನರ್‌ಅಪ್ ನ್ಯೂಜಿಲೆಂಡ್ (ನ.4, ಬೆಂಗಳೂರು) ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ (ನ. 11 ಕೋಲ್ಕತ) ಪಾಕ್‌ಗೆ ಮುಂದಿನ 4 ಎದುರಾಳಿಗಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts