More

    ಬುದ್ಧ ವಂದನೆಯೊಂದಿಗೆ ಪೂಜೆ

    ಬೇಲೂರು: ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ತಾಲೂಕಿನ ಮದಘಟ್ಟ ಸಮೀಪದ ಗಾಂಧಾರ ಬುದ್ಧ ವಿಹಾರದ ಅಂಬೇಡ್ಕರ್ ಬೆಟ್ಟದಲ್ಲಿ ಗಾಂಧಾರ ಬುದ್ಧ ವಿಹಾರದ ಟ್ರಸ್ಟ್ ಅಧ್ಯಕ್ಷ ಬೋಧಿದತ್ತ ಮಹಾಥೇರ ಭಂತೇಜಿ ನೇತೃತ್ವದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ, ಸಂಘ ವಂದನೆಯೊಂದಿಗೆ ಪೂಜೆ ನೆರವೇರಿಸಲಾಯಿತು.

    ಗಾಂಧಾರ ಬುದ್ಧ ವಿಹಾರದ ಅಂಬೇಡ್ಕರ್ ಬೆಟ್ಟವನ್ನು ವಿದ್ಯುತ್ ದೀಪಗಳಿಂದ ಹಾಗೂ ಪಂಚಶೀಲದ ಬಾವುಟಗಳಿಂದ ಸಿಂಗರಿಸಲಾಗಿತ್ತು. ಗುರುವಾರ ಬೆಳಗ್ಗೆ ಬೋಧಿದತ್ತ ಮಹಾಥೇರ ಭಂತೇಜಿ, ಬುದ್ಧರ ಜಾತಕ ಕಥೆ ಹೇಳುವ ಮೂಲಕ ದಿನನಿತ್ಯ ತಮ್ಮ ಜೀವನದಲ್ಲಿ ಪಂಚಶೀಲಗಳ ಮಹತ್ವ ಮತ್ತು ಪಾಲನೆ ಎಷ್ಟು ಮುಖ್ಯ ಎಂದು ಧಮ್ಮ ಪ್ರವಚನ ನೀಡಿದರು.

    ಹಾಸನದ ಜೀವ ಸಂಜೀವಿನಿ ರಕ್ತನಿಧಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಭಂತೇಜಿ ಸ್ವತಃ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸುಮಾರು 40 ಜನ ಬೌದ್ಧ ಉಪಾಸಕರು ರಕ್ತದಾನ ಮಾಡುವ ಮೂಲಕ ಬುದ್ಧ ಪೂರ್ಣಿಮೆ ಅರ್ಥಪೂರ್ಣಗೊಳಿಸಿದರು.

    ಉದ್ಯಮಿ ಗ್ರಾನೈಟ್ ರಾಜಶೇಖರ್, ಗಾಂಧಾರ ಬುದ್ಧ ವಿಹಾರದ ಉಪಾಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ರಾಜು ಅರೇಹಳ್ಳಿ, ಸಹಕಾರ್ಯದರ್ಶಿ ಕುಮಾರ್ ಗುಪ್ತ, ಖಜಾಂಚಿ ಮಂಜು ಮೊಗಸಾವರ, ಮೇಲ್ವಿಚಾರಕ ಶಿವರಾಜ್, ಟ್ರಸ್ಟ್ ಪದಾಧಿಕಾರಿಗಳಾದ ಗಂಗಾಧರ್, ವಿರೂಪಾಕ್ಷ ಪ್ರವೀಣ್ ಬೌಧ್, ಚಂದ್ರು, ಜೀವ ಸಂಜೀವಿನಿ ರಕ್ತನಿಧಿ ವ್ಯವಸ್ಥಾಪಕ ರವಿಕುಮಾರ್, ದಸಂಸ(ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್ ಹಾಗೂ ಹಾಸನ ಜಿಲ್ಲೆ ಮತ್ತು ತಾಲೂಕಿನ ಬೌದ್ಧ ಉಪಾಸಕ ಉಪಾಸಕಿಯರು, ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts