More

    ಸರ್ಕಾರಿ ವಾಹನದ ಮುಂದೆ ನಿಂತು ಕ್ಯಾಮೆರಾಗೆ ಪೋಸ್​: IAS ಅಧಿಕಾರಿಗೆ ಶಾಕ್​ ಕೊಟ್ಟ ಚುನಾವಣಾ ಆಯೋಗ

    ನವದೆಹಲಿ: ಸರ್ಕಾರಿ ವಾಹನದ ಮುಂದೆ ನಿಂತು ಕ್ಯಾಮೆರಾಗೆ ಸ್ಟೈಲ್​ ಆಗಿ ಪೋಸ್​ ನೀಡಿದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ಐಎಎಸ್​ ಅಧಿಕಾರಿಯನ್ನು ಗುಜರಾತ್​ ಚುನಾವಣಾ ವೀಕ್ಷಕ ಸ್ಥಾನದಿಂದ ತೆಗೆದು ಹಾಕಿರುವುದಾಗಿ ವರದಿಯಾಗಿದೆ.

    ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುವ ಮೂಲಕ ಅಭಿಷೇಕ್​ ಸಿಂಗ್​ ಅವರು ಪ್ರಚಾರಕ್ಕಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಅಂದಹಾಗೆ ಅಭಿಷೇಕ್​ ಸಿಂಗ್​, ಉತ್ತರ ಪ್ರದೇಶ ಕೇಡರ್​ನ ಐಎಎಸ್​​ ಅಧಿಕಾರಿ. ಅವರನ್ನು ಅಹಮದಬಾದ್​ನ ಎರಡು ಕ್ಷೇತ್ರಗಳಾದ ಬಾಪುನಗರ ಮತ್ತು ಅಸರ್ವಾದ ಸಾಮಾನ್ಯ ವೀಕ್ಷಕರಾಗಿ ನೇಮಕ ಮಾಡಲಾಗಿತ್ತು. ಸೂಟು ಬೂಟು ತೊಟ್ಟು ಕಪ್ಪು ಬಣ್ಣದ ಸರ್ಕಾರಿ ವಾಹಾನದ ಮುಂದೆ ನಿಂತು ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಕರ್ತವ್ಯದ ಸಮಯದಲ್ಲಿ ಪೋಸ್ಟ್​ ಮಾಡಿದ್ದಾರೆ.

    ಫೋಟೋವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ತಕ್ಷಣವೇ ಅಭಿಷೇಕ್​ ಅವರನ್ನು ಸಾಮಾನ್ಯ ವೀಕ್ಷಕ ಸ್ಥಾನದಿಂದ ತೆಗೆದು ಹಾಕಿದೆ. ಮುಂದಿನ ಆದೇಶದವರೆಗೆ ಯಾವುದೇ ಚುನಾವಣಾ ಕರ್ತವ್ಯದಲ್ಲಿ ಅಭಿಷೇಕ್​ ಪಾಲ್ಗೊಳ್ಳುವಂತಿಲ್ಲ. ಅಲ್ಲದೆ, ಇಂದೇ ಕ್ಷೇತ್ರವನ್ನು ತೊರೆಯುವಂತೆಯೂ ಅಧಿಕಾರಿಗೆ ಆದೇಶಿಸಲಾಗಿದೆ. ತಮ್ಮ ವೀಕ್ಷಕ ಕರ್ತವ್ಯಕ್ಕೆ ಒದಗಿಸಲಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ತಕ್ಷಣವೇ ಅವರು ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಭಿಷೇಕ್​ ಸಿಂಗ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಕ್ರಿಶನ್ ಬಾಜ್‌ಪೇಯ್ ಅವರನ್ನು ನೇಮಿಸಲಾಗಿದೆ. ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ಗುಜರಾತ್​ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್​)

    ಭಾರತದ ಮೊಟ್ಟ ಮೊದಲ ಖಾಸಗಿ ರಾಕೆಟ್​ ವಿಕ್ರಮ್​-ಎಸ್​ ಉಡಾವಣೆ ಯಶಸ್ವಿ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ; ಕೆಯುಡಬ್ಲುಜೆ ವಾರ್ಷಿಕ ಪ್ರಶಸ್ತಿ ಅರ್ಜಿ ಆಹ್ವಾನ

    ಈ ವಾರ 9 ಚಿತ್ರಗಳು ತೆರೆಗೆ: ಎರಡು ರೀ-ರಿಲೀಸ್​, ಏಳು ಹೊಸ ಎಂಟ್ರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts