More

    ಈ ವಾರ 9 ಚಿತ್ರಗಳು ತೆರೆಗೆ: ಎರಡು ರೀ-ರಿಲೀಸ್​, ಏಳು ಹೊಸ ಎಂಟ್ರಿ…

    ಬೆಂಗಳೂರು: ವರ್ಷದಂತ್ಯ ಸಮೀಪಿಸುತ್ತಲೇ ಚಿತ್ರರಂಗದಲ್ಲಿ ಸ್ಟಾಕ್​ ಕ್ಲಿಯರೆನ್ಸ್​ ಸೇಲ್​ ಎಂಬಂತೆ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತವೆ. ಅದಕ್ಕೆ ಎರಡು ಕಾರಣಗಳು, ವರ್ಷದ ಒಳಗೆ ಚಿತ್ರ ಬಿಡುಗಡೆಯಾದರೆ ಆ ವರ್ಷದ ಸಬ್ಸಿಡಿ ಪಡೆಯಬಹುದು. ಮತ್ತೊಂದು, ದೊಡ್ಡ ಚಿತ್ರಗಳು ಕ್ರಿಸ್ಮಸ್​ ಹಬ್ಬದ ರಜೆಗಳು ಮತ್ತು ಹೊಸ ವರ್ಷದ ಸಮಯದಲ್ಲಿ ಡಿಸೆಂಬರ್​ ಕೊನೆಯ ವಾರ ಬಿಡುಗಡೆಗೆ ಪ್ಲಾ$್ಯನ್​ ಮಾಡುತ್ತವೆ. ಹೀಗಾಗಿ ಅಷ್ಟರೊಳಗೆ ಸಣ್ಣ ಮತ್ತು ಮಧ್ಯಮ ಬಜೆಟ್​ ಚಿತ್ರಗಳು ರಿಲೀಸ್​ಗೆ ಮುಂದಾಗುವುದು ಸಾಮಾನ್ಯ.

    7 ಜಾನರ್​ನ 7 ಚಿತ್ರಗಳು ರಿಲೀಸ್​
    ಸಾಮಾನ್ಯವಾಗಿ ಒಂದೇ ಜಾನರ್​ನ ಎರಡು, ಮೂರು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದನ್ನು ನೋಡಿದ್ದೇವೆ. ಆದರೆ ಇವತ್ತು ಬಿಡುಗಡೆಯಾಗುತ್ತಿರುವ ಏಳು ಚಿತ್ರಗಳು ಸಹ ಬೇರೆ ಬೇರೆ ಜಾನರ್​ಗೆ ಸೇರಿದ ಚಿತ್ರಗಳು. ಅವುಗಳಲ್ಲಿ ರಾಮ್​ ನಾರಾಯಣ್​ ನಿರ್ದೇಶನದ ಪ್ರಜ್ವಲ್​ ದೇವರಾಜ್​ ನಾಯಕನಾಗಿರುವ ಆ್ಯಕ್ಷನ್​ ಎಂಟರ್​ಟೈನರ್​ ಚಿತ್ರ “ಅಬ್ಬರ’ ಕೂಡ ಒಂದು. ಚಿತ್ರದಲ್ಲಿ ಪ್ರಜ್ವಲ್​ ಮೂರು ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಲೇಖಚಂದ್ರ, ನಿಮಿಕಾ ರತ್ನಾಕರ್​, ರಾಜಶ್ರೀ ಪೊನ್ನಪ್ಪ ಹೀಗೆ ಮೂವರು ನಾಯಕಿಯರೊಂದಿಗೆ ನಟಿಸಿದ್ದಾರೆ.

    ಮತ್ತೊಂದು ಚಿತ್ರ “ಮಠ’. ರವೀಂದ್ರ ವೆಂಶಿ ನಿರ್ದೇಶನದ ಈ ಚಿತ್ರವನ್ನು 25 ಜಿಲ್ಲೆಗಳ 70 ಮಠಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಮಠದಲ್ಲಿ ನಡೆದ ನೈಜ ಟನೆಗಳ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಹಾಗೆಯೇ ಪ್ರೀತಿ, ಗೆಳೆತನ, ಸಂಬಂಧಗಳ ಸುತ್ತ ನಡೆಯುವ ಕೌಟುಂಬಿಕ ಮೌಲ್ಯಗಳನ್ನು ಸಾರುವ ಚಿತ್ರ “ಖಾಸಗಿ ಪುಟಗಳು’ ಕೂಡ ಇಂದು ಬಿಡುಗಡೆಯಾಗುತ್ತಿದೆ. ಇನ್ನು 26 ವರ್ಷದ ಯುವಕ ಮತ್ತು 32 ವರ್ಷದ ಯುವತಿಯ ನಡುವಿನ ವಿಭಿನ್ನ ಲವ್​ಸ್ಟೋರಿ “ಕುಳ್ಳನ ಹೆಂಡತಿ’, ಮಿಸ್ಟರಿ ಥ್ರಿಲ್ಲರ್​ “ಆವರ್ತ’, ಒಂದೇ ಪಾತ್ರದ ಸುತ್ತ ಸುತ್ತುವ “ದಿ ಫಿಲಂ ಮೇಕರ್​’, ಕನ್ನಡ ಮತ್ತು ಮರಾಠಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆ್ಯಕ್ಷನ್​ ಥ್ರಿಲ್ಲರ್​ “ಧಮ್​’… ಹೀಗೆ ಏಳು ಹೊಸ ಚಿತ್ರಗಳು ಬಿಡುಗಡೆಯಾಗುತ್ತಿವೆ. ಎಲ್ಲವೂ ಭಿನ್ನ, ವಿಭಿನ್ನ ಜಾನರ್​ಗೆ ಸೇರಿರುವ ಚಿತ್ರಗಳಾಗಿರುವ ಕಾರಣ ಈ ಶುಕ್ರವಾರ, ಪ್ರೇಕ್ಷಕರು ಯಾರಿಗೆ ಶುಭ ಹಾರೈಸಲಿದ್ದಾರೆ ಎಂಬ ಕುತೂಹಲವಿದೆ. ಈ ಹೊಸ ಚಿತ್ರಗಳ ಜತೆಜತೆಗೆ ಎರಡು ಹಳೆಯ ಕ್ಲಾಸಿಕ್​ ಚಿತ್ರಗಳು ಹೊಚ್ಚ ಹೊಸ ತಾಂತ್ರಿಕ ರೂಪ ಪಡೆದು ಮತ್ತೆ ಥಿಯೇಟರ್​ಗೆ ಲಗ್ಗೆ ಹಾಕಿವೆ.

    “ಭಾಗ್ಯವಂತರು’, “ಎಸ್​ಪಿ ಸಾಂಗ್ಲಿಯಾನ 2′ ತೆರೆಗೆ
    ಇಂದು ಕನ್ನಡದಲ್ಲಿ ಒಟ್ಟು ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಎರಡು ಹಳೆಯ ಚಿತ್ರಗಳು. 1977ರಲ್ಲಿ ಬಿಡುಗಡೆಯಾದ ಡಾ. ರಾಜಕುಮಾರ್​ ಅಭಿನಯದ “ಭಾಗ್ಯವಂತರು’ ಮತ್ತು 1988ರಲ್ಲಿ ರಿಲೀಸ್​ ಆದ ಶಂಕರ್​ ನಾಗ್​ ಅಭಿನಯದ “ಎಸ್​ಪಿ ಸಾಂಗ್ಲಿಯಾನ ಭಾಗ 2′ ರಿಲೀಸ್​ ಆಗುತ್ತಿವೆ. ವಿಶೇಷ ಅಂದರೆ “ಭಾಗ್ಯವಂತರು’ ರಾಜ್ಯಾದ್ಯಂತ 60ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ದೂರದ ಅಮೆರಿಕ, ನ್ಯೂಜಿಲ್ಯಾಂಡ್​, ಲಂಡನ್​ ಮತ್ತು ದುಬೈಗಳಲ್ಲಿ ರಿಲೀಸ್​ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts