More

    ಸಾಯಲೆಂದು ನದಿಗೆ ಹಾರಲು ಯತ್ನಿಸಿದವನನ್ನು ಹಿಡಿದು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ ಸಾರ್ವಜನಿಕರು..

    ವಿಜಯಪುರ: ಕೃಷ್ಣಾ ನದಿಗೆ ಅಡ್ಡಲಾಗಿ ಕೊಲ್ಹಾರ್ ಬಳಿ ಕಟ್ಟಿದ ಬೃಹತ್ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಸಾರ್ವಜನಿಕರು ಪೊಲೀಸರ ಮೂಲಕ ಆತನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಈ ಘಟನೆ ನಿನ್ನೆ ನಡೆದಿದ್ದು ಇದೀಗ ಅದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರಾ ಬಿ ಗ್ರಾಮದ ಕಲ್ಲಪ್ಪ ಪಾಟೀಲ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸೇತುವೆ ಮೇಲೆ ನಿಂತಿದ್ದ ಈತ ‘ನದಿಗೆ ಹಾರಿ ಸತ್ತರೆ ನನ್ನ ಶವ ಸಿಗುತ್ತದಾ?’ ಎಂದು ಸ್ಥಳೀಯ ನಿವಾಸಿ ಅಮೀನಸಾಬ್ ಜಾಲಗಾರನನ್ನು ಪ್ರಶ್ನಿಸಿದ್ದಾನೆ‌. ಇದರಿಂದ ಸಂಶಯಗೊಂಡ ಅಮಿನ್ ಸಾಬ್ ಆತನನ್ನು ಹಿಡಿದು ವಿಚಾರಿಸಿದ್ದಾರೆ. ಕೂಡಲೇ ಅವರಿಂದ ತಪ್ಪಿಸಿಕೊಂಡು ಹೊರಡುತ್ತಿದ್ದಂತೆ ಸ್ಥಳೀಯ ಇತರರು ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ವಾಹನದಲ್ಲಿ ಕರೆದೊಯ್ಯಬೇಕಾದರೆ ನಾನು ಸಾಯಬೇಕು ಬಿಡಿ ಎಂದು ಕಲ್ಲಪ್ಪ ಕಣ್ಣೀರು ಹಾಕಿದ್ದಾನೆ. ಬಳಿಕ ಪೊಲೀಸರು ಆತನ ಕುಟುಂಬಸ್ಥರನ್ನು ಕರೆಸಿ ಸುರಕ್ಷಿತವಾಗಿ ಅವರಿಗೆ ಒಪ್ಪಿಸಿದ್ದಾರೆ.

    ಸರ್ಕಾರದಿಂದ ಮತ್ತೊಂದು ಎಡವಟ್ಟು!; ಜೀವಂತ ಇರದವರಿಗೂ ಸದಸ್ಯ ಸ್ಥಾನ?

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts