More

    ಬಹಿರಂಗ ಸಭೆಯಲ್ಲಿ ಜನಜಂಗುಳಿ; ಸಿದ್ದು ಹೇಳಿದರೂ ಕ್ಯಾರೆ ಎನ್ನದ ಪೊಲೀಸರು, ಸಾರ್ವಜನಿಕರು

    ಬಾಗಲಕೋಟ: ಸ್ವಕ್ಷೇತ್ರದ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ಕಡೆಗೆಲ್ಲ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನೂ ಮರೆತು ಅವರನ್ನು ನೋಡಲು, ಮಾತನಾಡಿಸಲು ಮುಗಿ ಬೀಳುತ್ತಿದ್ದ ದೃಶ್ಯ ಗುರುವಾರ ಕಂಡುಬಂತು.

    ಹೊಸೂರ ಗ್ರಾಮದಲ್ಲಿ ಜನರು ಗುಂಪು ಗುಂಪಾಗಿ ನಿಂತು ಸಿದ್ದು ಅವರನ್ನು ನೋಡಿದರು. ಈ ವೇಳೆ ಸಾಕಷ್ಟು ಜನಜಂಗುಳಿ ಇತ್ತು. ಬಳಿಕ ನಂದಿಕೇಶ್ವರದಲ್ಲಿಯೂ ಇದೇ ಸ್ಥಿತಿ ಇತ್ತು. ಗುಳೇದಗುಡ್ಡದಲ್ಲಿ ಸಿದ್ದರಾಮಯ್ಯ ಅವರ ಭಾಷಣ ಕೇಳಲು ಸಾಕಷ್ಟು ಜನರು ನೆರೆದಿದ್ದರು. ಸಭೆಯಲ್ಲಿ ಕುಳಿತಿದ್ದ ಜನರ ನಡುವೆ ಪರಸ್ಪರ ಅಂತರವೇ ಇರಲಿಲ್ಲ.

    ಇದನ್ನೂ ಓದಿ   ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ: ಸಿದ್ದರಾಮಯ್ಯ, ಜಾರ್ಜ್ ವಿರುದ್ಧದ ಕೇಸ್ ರದ್ದು

    ಈ ದೃಶ್ಯವನ್ನು ನೋಡಿ, ಸ್ವಲ್ಪಮಟ್ಟಿಗೆ ಸಿದ್ದರಾಮಯ್ಯ ಅವರಿಗೂ ಅಚ್ಚರಿ ಮತ್ತು ಆತಂಕ ಆಯಿತು. ಹೀಗಾಗಿ ತಮ್ಮ ಭಾಷಣವನ್ನು ಅವರು ಕರೊನಾ ಜಾಗೃತಿಗೆ ಮೀಸಲಿಟ್ಟರು. ‘‘ನೀವು ಈ ರೀತಿ ಪರಸ್ಪರ ಅಂತರ ಇಲ್ಲದೆ ಕುಳಿತರೆ ನಾಳೆ ಸಿದ್ದರಾಮಯ್ಯನ ಸಭೆಯಲ್ಲಿ ಪರಸ್ಪರ ಅಂತರ ಇರಲಿಲ್ಲ ಅಂತಾರೆ. ಏನ್ರೀ ಪೊಲೀಸರೇ ಸುಮ್ಮನೆ ನಿಂತಿದ್ದಿರಲ್ರಿ? ನೋಡಿ ಜನ ಹೆಂಗ್ ನಿಂತಿದ್ದಾರೆ? ಈ ಥರಾ ಇದ್ದರೆ ನೀವು ಕೇಸ್ ಹಾಕಬಹುದಲ್ವಾ?’’ ಎಂದು ಸಿದ್ದರಾಮಯ್ಯ ವೇದಿಕೆ ಮೇಲಿಂದಲೇ ಪ್ರಶ್ನಿಸಿದರು.

    ಅದಕ್ಕೆ ಯಾರಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಪೊಲೀಸರು ಮೌನವಾಗಿದ್ದನ್ನು ನೋಡಿದ ಸಿದ್ದರಾಮಯ್ಯ, ‘‘ಇಲ್ಲಿನ ಪೊಲೀಸರು ಮತ್ತು ಜನರು ಇಬ್ಬರಿಗೂ ಕರೊನಾ ಬಗ್ಗೆ ಗಂಭೀರತೆ ಇದ್ದಂತಿಲ್ಲ…’’ ಎಂದು ಚುಚ್ಚಿದರು. ‘‘ಕರೊನಾ ಬಗ್ಗೆ ಎಚ್ಚರಿಕೆ ಇರಬೇಕು. ಈ ರೀತಿ ಒಬ್ಬರಿಗೊಬ್ಬರು ಅಕ್ಕಪಕ್ಕ ಇರಬಾರದು. ಕನಿಷ್ಠ ನಾಲ್ಕು ಅಡಿ ಅಂತರ ಇರಬೇಕು. ಈ ಕರೊನಾ ಹೇಗೆ ಬರುತ್ತೋ ಗೊತ್ತಾಗಲ್ಲ. ಹುಷಾರಾಗಿರಬೇಕು’’ ಎಂದು ಬುದ್ಧಿ ಹೇಳಿದರು. ಜನ ಮಾತ್ರ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ.

    ಲಾಕ್​ಡೌನ್ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ 1,885 ಕೋಟಿ ರೂ.ಮರುಪಾವತಿಸಿದ ಭಾರತೀಯ ರೈಲ್ವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts