More

    ಅಭಿವದ್ಧಿಗೆ ಹಣದ ಹೊಳೆ ಹರಿಯಲಿ ; ಕೋಲಾರ ಜಿಲ್ಲೆಯ ಜನರ ನಿರೀಕ್ಷೆ

    ಕೋಲಾರ : ಕಳೆದ ವರ್ಷ ಮಾರ್ಚ್ 5ರಂದು ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಬಿಡಿಗಾಸೂ ವಿಶೇಷ ಅನುದಾನ ಸಿಕ್ಕಿಲ್ಲ. ಕರೊನಾದಿಂದ ಸ್ಥಗಿತಗೊಂಡಿರುವ ಅಭಿವದ್ಧಿ ಕಾರ್ಯಗಳಿಗೆ ಈ ಬಾರಿ ಚಾಲನೆ ಸಿಗಬಹುದೆಂಬ ನಿರೀಕ್ಷೆಯಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಹಿ ನೀಡುತ್ತಾರೋ, ಕಹಿಯನ್ನೇ ಮುಂದುವರಿಸುತ್ತಾರೋ ನೋಡಬೇಕು.

    ಕಳೆದ ಬಜೆಟ್‌ನಲ್ಲಿ ಕೆಜಿಎಫ್ ಚಿನ್ನದ ಗಣಿಗೆ ಸೇರಿದ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ಘಟಕ ಸ್ಥಾಪಿಸುವ ಸಂಬಂಧ ಜಿಲ್ಲಾ ಆಡಳಿತ ಕಳುಹಿಸಿದ್ದ ಪ್ರಸ್ತಾವನೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ವದ್ಧಿಗೂ ಜಿಲ್ಲೆಯ ಪಾಲಿನ ಹಣ ಸಿಕ್ಕಿಲ್ಲ, ರೈಲ್ವೆ ವರ್ಕ್ ಶಾಪ್ ನಿರ್ವಾಣಕ್ಕೆ ಬೇಕಾದ ಭೂಮಿ ಒದಗಿಸಿಲ್ಲ. ಕೋಲಾರದಲ್ಲಿ ಕೌಶಲ ಅಭಿವದ್ಧಿ ಕೇಂದ್ರ ತೆರೆಯಲಾಗುವುದು, ಬಜೆಟ್‌ನಲ್ಲಿ ಇದಕ್ಕೆ ಅನುದಾನ ಪ್ರಕಟವಾಗಲಿದೆ ಎಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ನೀಡಿದ್ದ ಭರವಸೆ ಈಡೇರಿಲ್ಲ.

    ಜನರ ನಿರೀಕ್ಷೆ: ಆನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರವಾಗಿ ಗಡಿ ಭಾಗದಲ್ಲಿ ಸೋಲಾರ್ ಫೆನ್ಸಿಂಗ್ ಅಳವಡಿಸಲು ವಿಶೇಷ ಅನುದಾನ ನಿರೀಕ್ಷಿಸಲಾಗಿದೆ. ಅರಣ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿರುವುದರಿಂದ ಬಜೆಟ್‌ನಲ್ಲಿ ಅನುದಾನ ಘೋಷಿಸುವ ಮೂಲಕ ರೈತರ ಬೆಳೆ ರಕ್ಷಣೆ ಜತೆಗೆ ಅಮಾಯಕರ ಪ್ರಾಣ ಉಳಿಸಲು ಒತ್ತು ನೀಡಬೇಕಿದೆ.

    ಮಹಿಳೆಯರಿಗೆ ನೆರವು: ಕರೊನಾದಿಂದ ಜಿಲ್ಲೆಯ ಸಾವಿರಾರು ಮಹಿಳೆಯರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ, ಸರ್ಕಾರ ಬಡ ಮಹಿಳೆಯರಿಗೆ ಸ್ವಂತ ಉದ್ದಿಮೆ, ವ್ಯಾಪಾರ ವಹಿವಾಟು ನಡೆಸಲು ಕನಿಷ್ಠ 1ರಿಂದ 5 ಲಕ್ಷ ರೂ. ಸಾಲ ನೀಡುವ ಮೂಲಕ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸಬೇಕೆಂಬ ಕೂಗು ಕೇಳಿ ಬಂದಿದೆ.

    ಕೃಷಿ ಕೈಗಾರಿಕೆ: ಜಿಲ್ಲೆಯಲ್ಲಿ ಸಣ್ಣ ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಹೆಚ್ಚಾಗಿದ್ದಾರೆ, ಅನೇಕ ವರ್ಷಗಳಿಂದ ಕಷಿ ಆಧಾರಿತ ಕೈಗಾರಿಕೆ ಸ್ಥಾಪನೆಗೆ ಒತ್ತಾಯವಿದೆ, ಜಿಲ್ಲೆಯಲ್ಲಿ ವಾವು, ಟೊಮ್ಯಾಟೊ, ಹೂವು ಹೆಚ್ಚಾಗಿ ಬೆಳೆಯಲಾಗುತ್ತದೆ, ಸಂಸ್ಕರಣೆಗಾಗಿ ಬೆಳೆಗಳನ್ನು ಹೊರ ಜಿಲ್ಲೆಗೆ ತೆಗೆದುಕೊಂಡು ಹೋಗುವುದರಿಂದ ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಇರುವುದರಿಂದ ಎಪಿಎಂಸಿಗಳಲ್ಲಿ ಶೀಥಲ ಘಟಕ ಸ್ಥಾಪಿಸಲು ಯೋಜನೆ ರೂಪಿಸಬೇಕೆಂಬ ಕೂಗು ರೈತರಿಂದ ಕೇಳಿ ಬಂದಿದೆ.

    ವೇಮಗಲ್ ಅಭಿವದ್ಧಿ: ವೇಮಗಲ್, ಕುರುಗಲ್ ಸೇರಿ ಒಂದು ಪಟ್ಟಣ ಪಂಚಾಯಿತಿ ಮಾಡಲು ಸರ್ಕಾರ ತೀಮಾನ ತೆಗೆದುಕೊಂಡಿರುವುದು ಸರಿಯಷ್ಟೆ. ದೊಡ್ಡ ಪ್ರವಾಣದಲ್ಲಿ ಪಂಚಾಯಿತಿ ಕೇಂದ್ರ ಸಿದ್ಧಪಡಿಸಲು ಅಗತ್ಯ ಅನುದಾನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.

    ಪ್ರವಾಸೋದ್ಯಮ: ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವದ್ಧಿಗೆ ವಿುಲ ಅವಕಾಶಗಳಿವೆ, ಜಿಲ್ಲೆಯ ಆರ್ಥಿಕ ಸ್ಥಿತಿ ಗಟ್ಟಿಗೊಳಿಸಬಲ್ಲ ಯೋಜನೆ ಜಾರಿಗೆ ತಂದಲ್ಲಿ ಕೋಲಾರ ಜಿಲ್ಲೆಯ ಪ್ರವಾಸಿಗರ ನೆಚ್ಚಿನ ತಾಣವಾಗುವುದರಲ್ಲಿ ಅನುವಾನವಿಲ್ಲ. ಶಾಲಾ ಮಕ್ಕಳನ್ನು ಪ್ರವಾಸಕ್ಕಾಗಿ ಹೊರ ಜಿಲ್ಲೆ, ರಾಜ್ಯಕ್ಕೆ ಕರೆದೊಯ್ಯುವ ಬದಲು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಪರಿಚಯಕ್ಕೆ ಯೋಜನೆ ರೂಪಿಸಿದಲ್ಲಿ ಪ್ರವಾಸೋದ್ಯಮ, ಸಾರಿಗೆ ಇಲಾಖೆಗೆ ಒಂದಿಷ್ಟು ವರಮಾನ ಸಿಗಲಿದೆ, ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಸಹಾಯವಾಗಲಿದೆ.

    ಕೆರೆಗಳಿಗೆ ನೀರು : ಕೆಸಿ ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 121 ಕೆರೆಗಳಿಗೆ ನೀರು ಹರಿಸಲು ಯೋಜನೆ ಜಾರಿಗೆ ತರಲಾಗಿದೆ. ಮುಳಬಾಗಿಲು ತಾಲೂಕಿನ ಕೆರೆಗಳಿಗೆ ನೀರು ಹರಿದಿಲ್ಲ, ಸರ್ಕಾರ ನೀರಿನ ಹರಿವಿನ ಪ್ರವಾಣ ಹೆಚ್ಚಳದ ಜತೆಗೆ ಎರಡನೇ ಹಂತದಲ್ಲಿ ಗುರುತಿಸಿರುವ 200 ಕೆರೆಗಳಿಗೆ ನೀರು ಹರಿಸಲು ಅಗತ್ಯ ಹಣವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದಲ್ಲಿ ಅಂತರ್ಜಲ ಸಮಸ್ಯೆ ನಿವಾರಣೆಯಾಗಿ ಜಿಲ್ಲೆ ಮಲೆನಾಡಿನ ಮಾದರಿಯಲ್ಲಿ ಕಂಗೊಳಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts