More

    ಜಾಗೃತಿ ಮೂಡಿಸುವ ಕಲಾ ಜಾಥಾ ಯಶಸ್ವಿ

    ಬೆಳಗಾವಿ: ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲಿನ ದೌರ್ಜನ್ಯ ತಡೆ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕಲಾ ಜಾಥಾ ಅ.26 ರಿಂದ 29ರವರೆಗೆ ತಾಲೂಕಿನ ಆಯ್ದ ವಿವಿಧ ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿತು.

    ಚಿಕ್ಕೋಡಿ ತಾಲೂಕಿನ ಧುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘದ ಕಲಾ ತಂಡದವರು ದಾಮನೆ, ಕುರುಬಗಟ್ಟಿ, ಹಿಂಡಲಗಾ, ಸುಳಗೆ, ಉಚಗಾಂವ, ಬಸರತ್ತಿ, ಹೋನಗಾ, ಬೆನ್ನೋಳಿ ಗ್ರಾಮಗಳಲ್ಲಿ ಬೀದಿನಾಟಕ, ಜಾಗೃತಿ ಹಾಡುಗಳ ಮೂಲಕ ಕಲಾ ಪ್ರದರ್ಶನ ನೀಡಿದರು. ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಸಿಗುವ ಸೌಲಭ್ಯಗಳು ಮತ್ತು ಸಮಾಜದಲ್ಲಿ ಸಮಭಾವ ಮೂಡಿಸುವ ದೃಶ್ಯನಾಟಕ ಪ್ರದರ್ಶನ ಮಾಡಿ ಜಾಗೃತಿ ಮೂಡಿಸಿದರು.

    ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜರುಗಿದ ಕಾರ್ಯಕ್ರಮಕ್ಕೆ ಪಿಡಿಒ ಗಂಗಾಧರ ನಾಯಿಕ ಚಾಲನೆ ನೀಡಿದರು. ಗ್ರಾಮಸ್ಥರಾದ ದುರ್ಗಪ್ಪ ದೇವರಮನಿ, ಅಶೋಕ ಕಾಂಬಳೆ, ಧರ್ಮೇಂದ್ರ ಖಾತೆಕರ, ಸುಖದೇವ ಕಾಂಬಳೆ, ದಿನೇಶ ಮಾಸ್ತೆ, ಉಪಸ್ಥಿತರಿದ್ದರು.

    ಕಲಾ ತಂಡದಲ್ಲಿ ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಸಂತ್ರಾಮ ಮಯೂರ, ಮಾರುತಿ ಕಮತೆ, ವಿಷ್ಣು ಹಲಗೇಕರ, ಶಂಕರ ಖೋತ, ಅಪ್ಪಾಸಾಬ ಚಿಮನೆ, ಸಾವಿತ್ರಿ ಹಳಕಲ್, ಸುಜಾತಾ ಮಗದುಮ್ಮ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕ ಅನಿಲ ಬಾಳೆಕುಂದ್ರಿ ಸ್ವಾಗತಿಸಿದರು. ಅರುಣ ನುಚ್ಚಂಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts