More

    ಯುವನಿಧಿ ನೋಂದಣಿಗೆ ಮಾರ್ಗದರ್ಶನ ನೀಡಿ

    ಶಿವಮೊಗ್ಗ: ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಪದವೀಧರ ನಿರುದ್ಯೋಗಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಜ.12ರಂದು ಶಿವಮೊಗ್ಗದಲ್ಲಿ ನಡೆಯುವ ಯುವನಿಧಿ ಉದ್ಘಾಟನೆಗೆ ಹೆಚ್ಚಿನ ಸಂಖ್ಯೆಯ ಪದವೀಧರರು ಹಾಗೂ ವಿದ್ಯಾರ್ಥಿಗಳು ಆಗಮಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಜಿಲ್ಲೆಯ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳ ಪ್ರಚಾರ್ಯರೊಂದಿಗೆ ಸಭೆ ಮಾಡಿದ ಅವರು, ಜ.12ರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು. ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ನಾನು ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷನಾಗಿದ್ದ ಕಾರಣ ಶಿವಮೊಗ್ಗದಲ್ಲೇ ಯುವನಿಧಿ ಉದ್ಘಾಟನೆಯಾಗುತ್ತಿದೆ ಎಂದರು.
    ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಉದ್ಘಾಟನೆ ಮಾಡಲಾಗಿದೆ. ಈಗ ಪ್ರಣಾಳಿಕಯಲ್ಲಿನ ಮತ್ತೊಂದು ಭರವಸೆ ನಮ್ಮ ಜಿಲ್ಲೆಯಲ್ಲಿ ಈಡೇರುತ್ತಿದೆ. ಪದವೀಧರರು ಕೆಲಸವಿಲ್ಲದೇ ಪರಿತಪಿಸುತ್ತಿರುತ್ತಾರೆ. ಪಾಲಕರ ಬಳಿ ಹಣ ಕೇಳುವುದೂ ಅವರಿಗೆ ಕಷ್ಟ. ಹೀಗಾಗಿ ಅವರು ವೃತ್ತಿ ಜೀವನ ಕಂಡುಕೊಳ್ಳುವವರೆಗೂ ತಕ್ಕ ಮಟ್ಟಿನ ಆರ್ಥಿಕ ನೆರವು ನೀಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
    ಜಿಲ್ಲೆಯ 45 ಖಾಸಗಿ ಕಾಲೇಜುಗಳ ಪಟ್ಟಿ ನಮ್ಮ ಬಳಿಯಿದೆ. ಪ್ರತಿ ಕಾಲೇಜಿನಿಂದಲೂ ಶೇ.80ರಷ್ಟು ವಿದ್ಯಾರ್ಥಿಗಳು ಯುವನಿಧಿ ಉದ್ಘಾಟನೆಯಲ್ಲಿ ಭಾಗವಹಿಸಲಿ. ಆಯಾ ಕಾಲೇಜುಗಳ ಬಸ್ ಬಳಸಿಕೊಂಡರೆ ಉತ್ತಮ. ಬಸ್ ಇಲ್ಲದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಒದಗಿಸಲಾಗುವುದು. ಯಾವ ಕಾಲೇಜಿಗೆ ಎಷ್ಟು ಬಸ್‌ಗಳ ಅವಶ್ಯಕತೆಯಿದೆ ಎಂಬುದನ್ನು ಜಿಲ್ಲಾಡಳಿತಕ್ಕೆ ಮುಂಚಿತವಾಗಿ ತಿಳಿಸಿಬೇಕೆಂದು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ತಿಳಿಸಿದರು.
    ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿಘಿ, ಎಸ್ಪಿ ಮಿಥುನ್ ಕುಮಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts