More

    ಚನ್ನಬಸಪ್ಪರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ವಿಷಯ

    ಶಿಗ್ಗಾಂವಿ: ರಾಜ್ಯೋತ್ಸವ ಪ್ರಶಸ್ತಿ ನಮ್ಮ ಜಿಲ್ಲೆಯ ಬಯಲಾಟ ಹಿರಿಯ ಕಲಾವಿದ ಚನ್ನಬಸಪ್ಪ ಬೆಂಡಿಗೇರಿ ಅವರಿಗೆ ನೀಡಿರುವುದು ಈ ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ. ಉತ್ತಮ ಕಲಾವಿದರಿಗೆ ಪ್ರಶಸ್ತಿಗಳು ಹುಡುಕಿ ಬರುತ್ತವೆ ಅನ್ನುವುದಕ್ಕೆ ಚನ್ನಬಸಪ್ಪ ಬೆಂಡಿಗೇರಿ ಅವರೇ ಸಾಕ್ಷಿ ಎಂದು ಪಂ. ಪುಟ್ಟರಾಜ ಗವಾಯಿಗಳ ಕಲಾ ಸಂಘದ ಅಧ್ಯಕ್ಷ ಫಕೀರೇಶ ಕೊಂಡಾಯಿ ಹೇಳಿದರು.

    ಪಟ್ಟಣದ ಪುಟ್ಟರಾಜ ಗವಾಯಿಗಳ ಕಲಾ ಸಂಘ ಹಾಗೂ ಶ್ರೀರಾಮಚಂದ್ರಪ್ಪ ನೇಪತ್ಯ ವೇಷ ಭೂಷಣ ಕಲಾ ಸಂಸ್ಥೆ ಸಹಯೋಗದಲ್ಲಿ ಕಲಾ ಸಂಘದ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಇತ್ತೀಚೆಗೆ ಪ್ರಶಸ್ತಿ ಪಡೆಯಲು ಕೆಲವರು ಲಾಬಿ ನಡೆಸುತ್ತಾರೆ. ಇದರಿಂದ ಉತ್ತಮ ಕಲಾವಿದರಿಗೆ ಪ್ರಶಸ್ತಿಗಳು ಮರೀಚಿಕೆಯಾಗಿವೆ. ಆದರೆ, ಸರ್ಕಾರ ಈ ಸಲ ಯಾವುದೇ ಲಾಬಿಗೆ ಆಸ್ಪದ ನೀಡದೇ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

    ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಶಂಕರ ಅರ್ಕಸಾಲಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚನ್ನಬಸಪ್ಪ ಬೆಂಡಿಗೇರಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ತಾ.ಪಂ. ಉಪಾಧ್ಯಕ್ಷೆ ವಿಜಯಲಕ್ಷ್ಮೀ ಮುಂದಿನಮನಿ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಫಿರೋಜಿ ಶಿಂಧೆ ಅವರನ್ನು ಕಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪಟ್ಟಣದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕೊಟ್ರೇಶ ಮಾಸ್ತರ ಬೆಳಗಲಿ, ಶೇಖಪ್ಪ ಜೋಳದ, ಶಿವಾನಂದ ಹೊಸಮನಿ, ಬಸವರಾಜ ಶಿಗ್ಗಾಂವ, ಚಂದ್ರಶೇಖರ ಕಮಡೊಳ್ಳಿ, ಮಲ್ಲಿಕಾರ್ಜುನ ಗೊಬ್ಬರಗುಂಪಿ, ಶರೀಫ ಮಾಕಪ್ಪನವರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts