More

    ಲಂಕಾ ಸಂಸತ್ತಿನ ಮುಂದೆ ಒಳಉಡುಪಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಆಕ್ರೋಶ: ವಿಡಿಯೋ ವೈರಲ್​!

    ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ದಶಕಗಳಲ್ಲೇ ಅತ್ಯಂತ ಕಳಪೆ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಂಕಾವನ್ನು ಈ ಸ್ಥಿತಿಗೆ ತಂದ ಸರ್ಕಾರದ ವಿರುದ್ಧ ಅಲ್ಲಿನ ಜನರು ಶಪಿಸುತ್ತಿದ್ದು, ಸಾಲು ಸಾಲು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

    ಶುಕ್ರವಾರವು ಸಹ ಅನೇಕ ಅಂಗಡಿಗಳು, ಶಾಲೆಗಳು ಹಾಗೂ ವ್ಯವಹಾರಗಳು ಬಂದ್​ ಆಗಿದ್ದವು. ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಕೆಲಸವನ್ನು ತ್ಯಜಿಸಿ ಪ್ರತಿಭಟನೆಗೆ ಇಳಿದಿದ್ದರು. ಲಂಕಾವನ್ನು ಈ ಸ್ಥಿತಿಗೆ ತಂದ ಆಡಳಿತಾರೂಢ ಪಕ್ಷದ ನಾಯಕರು ಈ ಕೂಡಲೇ ಕೆಳಗಿಳಿಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕಳೆದ 69 ವರ್ಷಗಳ ಬಳಿಕ ಲಂಕಾ ಇಂತಹ ದುಸ್ಥಿತಿಯನ್ನು ಎದುರಿಸುತ್ತಿದೆ.

    ಪ್ರತಿಭಟನಾಕಾರರು ಸಂಸತ್ತಿನ ಆವರಣದೊಳಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ತಡೆದರು. ಆದರೂ ನೂರಾರು ಪ್ರತಿಭಟನಾಕಾರರು ಗುರುವಾರವೇ ಧರಣಿ ಆರಂಭಿಸಿದ್ದು, ಸಂಸತ್ತಿನ ಮುಖ್ಯ ರಸ್ತೆಯ ಹೊರಗೆ ಬೀಡುಬಿಟ್ಟಿದ್ದಾರೆ. ಪ್ರತಿಭಟನೆ ವೇಳೆ ಗಮನ ಸೆಳೆದ ಸಂಗತಿಯೆಂದರೆ, ಅನೇಕ ಪ್ರತಿಭಟನಾಕಾರರು ಮನೆಯಿಂದ ತಂದ ತಮ್ಮ ಒಳಉಡುಪುಗಳನ್ನು ಬ್ಯಾರಿಕೇಡ್‌ಗಳಲ್ಲಿ ನೇತುಹಾಕಿ ಸರ್ಕಾರವನ್ನು ವ್ಯಂಗ್ಯವಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

    ಸರ್ಕಾರವನ್ನು ತ್ಯಜಿಸಿ ಆಡಳಿತ ಪಕ್ಷದ ನಾಯಕರು ಈ ಕ್ಷಣವೇ ಮನೆಗೆ ಹೋಗಬೇಕು ಎಂದು ಕೂಗುಗಳು ಪ್ರತಿಭಟನಾಕಾರರಿಂದ ಕೇಳಿಬಂದವು. ಅಲ್ಲದೆ, ಇದೇ ಘೋಷಣೆಗಳನ್ನು ಕೆಲವು ಒಳ ಉಡುಪುಗಳು ಮತ್ತು ನಡುವಂಗಿಗಳ ಮೇಲೆಯು ಬರೆಯಲಾಗಿತ್ತು.

    ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ‘ಒಳ ಉಡುಪು ಪ್ರತಿಭಟನೆ’ ಎಂಬ ಶೀರ್ಷಿಕೆಯಡಿಯಲ್ಲಿ ತುಂಬಾ ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)

    ಜಾರ್ಖಂಡ್​ನ IAS ಅಧಿಕಾರಿಯ ಆಪ್ತರಿಬ್ಬರ ಬಳಿ ರಾಶಿ ಹಣ ಪತ್ತೆ: ಇಡಿ ವಶಕ್ಕೆ ಪಡೆದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

    ಶಾಲೆಯ ಸ್ಮಾರ್ಟ್​ ಟಿವಿಗೆ ಮೊಬೈಲ್​​ ಕನೆಕ್ಟ್​ ಮಾಡಿ ‘ಪುಷ್ಪ’ ಹಾಡಿಗೆ ಹೈಸ್ಕೂಲ್​ ವಿದ್ಯಾರ್ಥಿಗಳ ಡಾನ್ಸ್​: ಮುಖ್ಯ ಶಿಕ್ಷಕಿ ಸಸ್ಪೆಂಡ್​

    ಭಾನುವಾರ ಮಧ್ಯಾಹ್ನದ ವೇಳೆಗೆ ಸೈಕ್ಲೋನ್ ಸೃಷ್ಟಿ? ಹವಾಮಾನ ಇಲಾಖೆ ಮೂನ್ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts