More

    ಅಬುಧಾಬಿಯಿಂದ ಬಂದ ಪ್ರಯಾಣಿಕನ ಒಳ ಉಡುಪಿನಲ್ಲಿತ್ತು ಚಿನ್ನ: 47 ಲಕ್ಷ ಮೌಲ್ಯದ 918 ಗ್ರಾಂ. ಚಿನ್ನ ವಶ

    ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಕಳ್ಳ ಸಾಗಣಿಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ವಾರ ಕಳೆಯುವ ಮುನ್ನವೇ ಒಂದೇ ಮಾದರಿಯ ಮತ್ತೊಂದು ಪ್ರಕರಣ ಬಯಲಾಗಿದೆ.

    ಒಳ ಉಡುಪಿನಲ್ಲಿ 918.01 ಗ್ರಾಂ ಚಿನ್ನ ಇಟ್ಟುಕೊಂಡಿದ್ದ ಪ್ರಯಾಣಿಕನನ್ನು ವಿಮಾನ ನಿಲ್ದಾಣ ತಪಾಸಣಾ ಅಧಿಕಾರಿಗಳು ಬಂಧಿಸಿದ್ದಾರೆ. ಅಬುಧಾಬಿಯಿಂದ ಬಂದ ಈ ವ್ಯಕ್ತಿ ತನ್ನ ಒಳ ಉಡುಪಿನಲ್ಲಿ ಚಿನ್ನದ ಬಿಸ್ಕೆಟ್​ ಇಟ್ಟುಕೊಂಡು ಬಂದಿದ್ದ. ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.

    47 ಲಕ್ಷ ಮೌಲ್ಯದ 918.01 ಗ್ರಾಂ ಚಿನ್ನವನ್ನು ಅಬುಧಾಬಿ ಪ್ರಯಾಣಿಕನಲ್ಲಿ ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದ್ದೇವೆಂದು ಅಧಿಕಾರಿಗಳು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಕಳೆದ ವಾರವಷ್ಟೇ 966.10 ಗ್ರಾಂ ಚಿನ್ನ ಇದೇ ಮಾದರಿಯಲ್ಲಿ ಇಟ್ಟುಕೊಂಡಿದ್ದ ಪ್ರಯಾಣಿಕನನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್​)

    ಭಟ್ಕಳ ಪೊಲೀಸರಿಂದ ಕಾರ್ಯಾಚರಣೆ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2 ಲಕ್ಷ ರೂ.ಮೌಲ್ಯದ ವಿದೇಶಿ ಸಿಗರೇಟ್ ವಶಕ್ಕೆ

    70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts