More

    25 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ; ಗುತ್ತಿಗೆದಾರರ ಆಗ್ರಹ

    ಶಿವಮೊಗ್ಗ: ಸರ್ಕಾರ ಬಾಕಿ ಉಳಿಸಿಕೊಂಡಿರುವ 25 ಸಾವಿರ ಕೋಟಿ ರೂ. ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದಿಂದ ಜ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಎಸ್.ಧನಶೇಖರ್ ತಿಳಿಸಿದರು.
    ಗುತ್ತಿಗೆದಾರರು ಈವರೆಗೂ ಪೂರೈಸಿದ ಕಾಮಗಾರಿಗಳ ಬಾಕಿ ಮೊತ್ತವೇ 25 ಸಾವಿರ ಕೋಟಿ ರೂ. ಇದ್ದು ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಕಾಮಗಾರಿಯ ಬಿಲ್ ಪಾವತಿ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಕೆಟಿಟಿಪಿ(ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ) ಕಾಯ್ದೆಯಲ್ಲಿ ಇಲ್ಲದಿರುವ ನಿಯಮ ಬಾಹಿರವಾದ ಸೈಟ್ ಇನ್‌ವೆಸ್ಟಿಗೇಷನ್ ರಿಪೋರ್ಟ್ ಪ್ರಕಾರ ಸೈನ್ಡ್ ಬೈ ಸಬ್‌ಡಿವಿಜನ್ ಎಇಇ ಎಂಬ ಪದ್ಧತಿ ರದ್ದುಪಡಿಸಬೇಕು. ಈ ಹಿಂದೆ ಟೆಂಡರ್ ಸಲ್ಲಿಸುವಾಗ ಬ್ಯಾಂಕ್ ಗ್ಯಾರಂಟಿಯನ್ನು ಎಲ್.1 ಗುತ್ತಿಗೆದಾರರರಿಗೆ ಕನ್‌ಫರ‌್ಮೇಷನ್ ಅನ್ನು ಪಡೆಯಲಾಗುತ್ತಿತ್ತು. ಅದೇ ರೀತಿ ಲೈಫ್ ಆಫ್ ಕ್ರೆಡಿಟ್ ಅನ್ನು ಸಹ ಎಲ್.1 ಗುತ್ತಿಗೆದಾರರಿಗೆ ಕಾಮಗಾರಿಗಳ ಒಪ್ಪಂದದ ಸಮಯದಲ್ಲಿ ಪಡೆಯಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
    ಕೆಡಬ್ಲ್ಯೂ-1 ಪ್ರಕಾರ 20 ಲಕ್ಷ ರೂ. ಮೊತ್ತದ ಕಾಮಗಾರಿಗಳಿಗೆ ಅರ್ಹತಾ ಪ್ರಮಾಣ ಪತ್ರಕ್ಕೆ ಅವಕಾಶ ಇರುವುದಿಲ್ಲ. ಅದೇ ರೀತಿ 50 ಲಕ್ಷ ರೂ. ಒಳಗಿನ ಕಾಮಗಾರಿಗಳಿಗೆ ಕೆಡಬ್ಲುೃ-1 ಮತ್ತು ಕೆಡಬ್ಲುೃ-2ರ ಪ್ರಕಾರ ಏಕಗವಾಕ್ಷಿ ಪದ್ಧತಿಯಲ್ಲಿ ಟೆಂಡರ್ ಕರೆಯಬೇಕು. ಕೆಡಬ್ಲ್ಯೂ-1, ಕೆಡಬ್ಲ್ಯೂ-2, ಕೆಡಬ್ಲ್ಯೂ-3 ಮತ್ತು ಕೆಡಬ್ಲ್ಯೂ-4ರ ಪ್ರಕಾರ ಟೆಂಡರ್ ಆಹ್ವಾನಿಸುವಾಗ ಟೆಂಡರ್ ಮೌಲ್ಯಮಾಪನ ಅಥವಾ ಅಗ್ರಿಮೆಂಟ್ ಜೇಷ್ಠತೆಯ ಆಧಾರದಲ್ಲಿ ಬಿಲ್ ಪಾವತಿಯನ್ನು ನಿಗದಿಪಡಿಸಬೇಕಾಗಿರುವ ಕಾರಣ ಮಾನದಂಡಗಳನ್ನು ಅನುಷ್ಠಾಧಿಕಾರಿಗಳು ಉಲ್ಲಂಘಿಸುತ್ತಿದ್ದು ಅನುಷ್ಠಾನಾಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts