More

    ಕೊಳವೆ ಬಾವಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

    ಮಂಗಳೂರು: ಹೆಚ್ಚುತಿರುವ ನಿರ್ವಹಣಾ ವೆಚ್ಚ, ದುಪ್ಪಟ್ಟಾದ ಇಂಧನ ದರ, ಯಂತ್ರ ಸಂಬಂಧಿ ಬಿಡಿಭಾಗಗಳ ದರ ಏರಿಕೆ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ದ.ಕ ಮತ್ತು ಉಡುಪಿ ಜಿಲ್ಲಾ ರಿಗ್ ಮಾಲೀಕರ ಸಂಘವು ಗುರುವಾರದಿಂದ ಕೊಳವೆ ಬಾವಿ ಕೊರೆಯುವ ಕೆಲಸ ತಾತ್ಕಾಲಿಕ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದೆ.

    ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಪುತ್ತೂರು, ಬೆಳ್ತಂಗಡಿ, ಉಡುಪಿ ಜಿಲ್ಲೆ ಸಹಿತ 80ಕ್ಕೂ ಅಧಿಕ ವಾಹನಗಳು ಕೆಲಸ ನಡೆಸದೆ ನಿಲುಗಡೆಯಾಗಿವೆ. ನಿಲ್ಲಿಸಲಾದ ರಿಗ್ ಯಂತ್ರಗಳಲ್ಲಿ ದುಡಿಯುವ ಕಾರ್ಮಿಕರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಪುರುಷೋತ್ತಮ್ ಆರ್.ಶೆಟ್ಟಿ ಅವರು, ಇತರ ಉದ್ಯಮಗಳಂತೆ ಕರೊನಾ ಹಾವಳಿಯಿಂದ ನಮ್ಮ ಉದ್ಯಮವೂ ತತ್ತರಿಸಿದೆ. ಡೀಸೆಲ್ ಬೆಲೆ 75 ರೂ. ಗಳನ್ನು ದಾಟಿದೆ. ಇದರ ಜತೆ ಯಂತ್ರಗಳ ಬಿಡಿಭಾಗಗಳ ದರ ದುಬಾರಿಯಾಗಿದೆ.

    ಯಂತ್ರದಲ್ಲಿ ಕೆಲಸ ಮಾಡಲು 30 ಕಾರ್ಮಿಕರು ಅಗತ್ಯವಾಗಿದ್ದು, ಅವರ ವೇತನ, ವಸತಿ ಮತ್ತಿತರ ನಿರ್ವಹಣಾ ವೆಚ್ಚವೂ ಕೂಡ ಅಧಿಕವಾಗುತ್ತಿದೆ. ಮಳೆಗಾಲದ ಅವಧಿಯಲ್ಲಿ 6 ತಿಂಗಳು ಯಾವುದೇ ಕೆಲಸವಿಲ್ಲದಿದ್ದರೂ ಕಾರ್ಮಿಕರ ನಿರ್ವಹಣಾ ವೆಚ್ಚ ನಾವೇ ಭರಿಸಬೇಕಾಗಿದೆ. ಈಗಿರುವ ದರಕ್ಕಿಂತ ಶೇ.40ರಷ್ಟು ಏರಿಕೆ ಮಾಡಿದ್ದಲ್ಲಿ ಮಾತ್ರ ಈ ಉದ್ಯಮವನ್ನು ಮುಂದುವರಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರೈತಾಪಿ ವರ್ಗಕ್ಕೆ, ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದೇವೆ. ನಮ್ಮ ಸಮಸ್ಯೆಗಳಿಗೆ ಸಾರ್ವಜನಿಕರು ಸ್ಪಂದಿಸುವ ಭರವಸೆ ಹೊಂದಿದ್ದೇವೆ ಎಂದರು.

    ಸರ್ಕಾರಿ ಯೋಜನೆ ಸೇರಿದಂತೆ ಕೊಳವೆ ಬಾವಿಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ. ಆದರೆ ಹಳೇ ದರದಲ್ಲಿ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ಹೀಗಾಗಿ ನಷ್ಟ ಮಾಡಿಕೊಳ್ಳುವುದಕ್ಕಿಂತ ಕೊಳವೆ ತೋಡುವುದನ್ನು ಸ್ಥಗಿತಗೊಳಿಸಿ ತಮ್ಮ ಸಂಕಷ್ಟ ಸರಿಪಡಿಸಿಕೊಳ್ಳಲು ಮಾಲೀಕರು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts