More

    ಅಪಘಾತ ವಲಯ ಗುರುತಿಸಲು ಒತ್ತಾಯ

    ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಬೀದರ್-ಬೆಂಗಳೂರು ಹೆದ್ದಾರಿ ರಸ್ತೆಯನ್ನು ಅಪಘಾತ ವಲಯವೆಂದು ಘೋಷಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕದ ಸದಸ್ಯರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

    ಸಂಘಟನೆ ಮುಖಂಡರು ಮಾತನಾಡಿ, ನಗರಸಭೆ ವ್ಯಾಪ್ತಿಯ ಬೀದರ್-ಬೆಂಗಳೂರು ರಸ್ತೆ ಹಾದು ಹೋಗಿದೆ. ವೀರಪ್ಪ ನಿಷ್ಠಿ ಇಂಜನಿಯರಿಂಗ್ ಕಾಲೇಜಿನಿಂದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತ ಮಾರ್ಗವಾಗಿ ಅದಿತಿ ಹೋಟೆಲ್‌ವರೆಗೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಇತ್ತೀಚೆಗೆ ವಿಪರೀತ ಅಪಘಾತ ಸಂಭವಿಸಿ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹೆದ್ದಾರಿಯಲ್ಲಿ ಭಾರವಾದ ಮತ್ತು ಲಘು ವಾಹನ, ಕಾರು ಮತ್ತು ಬೈಕ್‌ಗಳು ವೇಗವಾಗಿ ಸಂಚರಿಸುವ ಕಾರಣ ಯಾರೂ ನಿಯಮ ಪಾಲನೆ ಮಾಡುವುದಿಲ್ಲ. ಇದರಿಂದದ ಹೆಚ್ಚಿನ ಅಪಘಾತಗಳಾಗುತ್ತವೆ ಎಂದು ತಿಳಿಸಿದರು.

    ಈ ಅಪಘಾತ ತಪ್ಪಿಸಲು ರಸ್ತೆ ಮಧ್ಯದಲ್ಲಿ ಬೀದಿ ದೀಪ ಅಳವಡಿಸಬೇಕು. ರೋಡ್ ಬ್ರೆಕ್‌ರ ಮತ್ತು ಪಾದಾಚಾರಿ ಗೋಡೆ ನಿರ್ಮಿಸಬೇಕು. ೩೦ ಕಿಮೀ ವೇಗದಲ್ಲಿ ಚಲಾಯಿಸಲು ಫಲಕ ಹಾಕಬೇಕು. ಇಲ್ಲಿದಿದ್ದರೆ ರಸ್ತೆ ತಡೆದು ಹಾಗೂ ನಗರಸಭೆ ಮುಂದೆ ಬೃಹತ್ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

    ಶಿವರಾಜ ವಗ್ಗರ ದೀವಳಗುಡ್ಡ, ಶರಣಪ್ಪ ಬೈರಿಮರಡಿ, ಮಲ್ಲಪ್ಪ ಕಬಾಡಗೇರಾ, ರಾಜು ದರಬಾರಿ, ರಾಘವೇಂದ್ರ ಗೋಗಿಕೇರಾ, ಹಣಮಂತ ಭಂಡಾರಿ, ಕೃಷ್ಣಾ ಹಾವಿನ್ ಬಾದ್ಯಾಪುರ, ತಿಪ್ಪಣ್ಣ ಖಾನಿಕೇರಿ, ರಾಜು ಹುಂಡೆಕಲ್, ರವಿ ಬಿಚ್ಚಗತ್ತಿಕೇರಾ, ರಮೇಶ ಓಕಳಿ, ಧನರಾಜ ರಾಠೋಡ, ನಾಗರಾಜ, ಸಾಬಣ್ಣ, ಹುಸೇನಿ ರಂಗಂಪೇಟೆ, ಗಣಪತಿ ರತ್ತಾಳ, ಗೌಸ್ ರಂಗಂಪೇಟೆ, ರಂಗಪ್ಪ, ಚನ್ನಪ್ಪ, ಟಿಪ್ಪು ಸುಲ್ತಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts