More

    ಡಿ.11 ರಂದು ಸುವರ್ಣ ಸೌಧ ಮುಂಭಾಗದಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರ, ಸಿಬ್ಬಂದಿಗಳ ಪ್ರತಿಭಟನೆ

    ಗದಗ: ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿ ಡಿ.11 ರಂದು ರಾಜ್ಯಮಟ್ಟದ ಅನುದಾನ ರಹಿತ ಶಾಲಾ ಶಿಕ್ಷಕರ, ಸಿಬ್ಬಂದಿಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಶಿಧರ ದಿಂಡೂರ ಹೇಳಿದರು. 

    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅನುದಾನ ರಹಿತ ಶಾಲೆಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ನೋಂದಣಿ, ಅನುದಾನ, ಆರ್ ಟಿ ಇ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣವನ್ನು ಹೈಕೋರ್ಟ್ ಆದೇಶದಂತೆ ಕನಿಷ್ಠ 10 ವರ್ಷ ನೀಡಬೇಕು. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಕೇವಲ 1 ವರ್ಷ ನೋಂದಣಿ ಮಾಡಿಕೊಡುತ್ತಿದೆ ಎಂದರು.

    ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಫೈಯರ್ ಸೇಫ್ಟಿ, ಕಟ್ಟಡ ಸುರಕ್ಷತೆಯಲ್ಲಿ ಕೋರ್ಟ್ ಆದೇಶದಂತೆ ವಿನಾಯಿತಿ ನೀಡಬೇಕು. ಆಸ್ಪತ್ರೆಗಳಿಗೆ ಈ ಎರಡು ವಿಷಯಗಳಲ್ಲಿ ವಿನಾಯಿತಿ ನೀಡಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡಿಲ್ಲ. ಹೈಕೋರ್ಟ್ ಕೂಡ 2018 ರ ಮುಂಚೆ ಆರಂಭಿಸಿದ ಶಾಲೆಗಳಲ್ಲಿ ಈ ಎರಡು ನಿಯಮ ಅನ್ವಿಸುವುದಿಲ್ಲ ಎಂದು ಆದೇಶ ಮಾಡಿದೆ. ಸರ್ಕಾರಕ್ಕೂ ಈ ಬಗ್ಗೆ ಅರಿವಿದೆ ಎಂದು ತಿಳಿಸಿದರು.

    ರಾಜಕೀಯ ದುರುದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ದೇಶಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೆ ಈ ಹಿಂದಿನ ಸರ್ಕಾರ ಈ ನೀತಿ ಜಾರಿಗೆ ತಂದಿದೆ. ಸಿಬಿಎಸ್ ಸಿ ಶಾಲಾ ವಿದ್ಯಾರ್ಥಿಗಳು ಕಲಿಯುವ ಪಠ್ಯವನ್ನೇ ಎಲ್ಲ ಮಕ್ಕಳು ಕಲಿಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಮಾಡಲಾಗಿದೆ. ಹಾಗಾಗಿರಾಷ್ಟ್ರೀಯ ಶಿಕ್ಷಣ ನೀತಿ ಕಡ್ಡಾಯ ಜಾರಿ ಆಗಬೇಕು. 1995 ರಿಂದ 2020ರ ವರೆಗೆ ಆರಂಭವಾದ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ   ನಡೆಸಲಾಗುವುದು ಎಂದರು.

    ಜಯದೇವ ಮೆಣಸಗಿ ಮಾತನಾಡಿ, ಖಾಸಗಿ ಅನುದಾನ ರಹಿತ ಶಾಲಾ ಸಿಬ್ಬಂದಿ, ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಲು, ನಮ್ಮ ಹಕ್ಕುವಪಡೆಯಲು ಈ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಪ್ರಮುಖ 7 ಬೇಡಿಕೆಗಳನ್ನು ಇಲಾಖೆ ಸಚಿವರು ಈಡೇರಿಸಬೇಕು. ರಾಜ್ಯದ ಎಲ್ಲ ಅನುದಾನ ರಹಿತ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

    ಎಂ.ಎಂ. ಧಲಾಯತ್, ಬಿ.ಡಿ. ಹರ್ತಿ, ಎಚ್.ಎನ್. ಗದಗ, ಮಲ್ಲಿಕಾರ್ಜುನ ಗೊಡಚಪ್ಪನವರ  ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts