More

    ಸೇವಾ ಭದ್ರತೆ, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

    ನರಗುಂದ: ಅಂಗನವಾಡಿ ಕೆಲಸಗಾರರನ್ನು ಕೇಂದ್ರ ಸರ್ಕಾರ ನಿರ್ಲಕ್ಷೃ ಮಾಡುತ್ತಿದೆ ಎಂದು ಆರೋಪಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರ ಶಿಶು ಅಭಿವೃದ್ಧಿ ಮತ್ತು ಶಿಕ್ಷಣದ ಮುಖ್ಯ ಉದ್ದೇಶವನ್ನೇ ಮರೆತಿದೆ. ಆಯವ್ಯಯಗಳಲ್ಲಿ ಐಸಿಡಿಎಸ್ ಯೋಜನೆಗೆ ಮನ್ನಣೆ ಕೊಡುತ್ತಿಲ್ಲ. ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

    2018ರ ನಂತರ ಗೌರವಧನ ಏರಿಕೆ ಆಗಿಲ್ಲ. ಕಾರ್ಯಕರ್ತೆಯರು 8ರಿಂದ 10 ತಾಸು ಕೆಲಸ ಮಾಡುತ್ತಿದ್ದಾರೆ. 2022ರ ಮಾರ್ಚ್ 29ರಂದು ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ದೇಶನದಲ್ಲಿ ಕಾರ್ಮಿಕ ಸಂಘಗಳ ಎಲ್ಲ ಕಾರ್ಯಚಟುವಟಿಕೆ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ ಎಂದು ದೂರಿದರು.

    ಕನಿಷ್ಠ ವೇತನ ನಿಗದಿ ಮಾಡಬೇಕು. ಇಎಸ್‌ಐ, ಪಿಎಫ್ ಸೇರಿ ಸಾಮಾಜಿಕ ಭದ್ರತೆ ಸೌಲಭ್ಯ ನೀಡಬೇಕು. ಏಕರೂಪದ ಸೇವಾ ನಿಯಮಾವಳಿ ರೂಪಿಸಬೇಕು. ಎನ್‌ಇಪಿ ಹಿಂಪಡೆಯಬೇಕು. ಐಸಿಡಿಸಿ ಯೋಜನೆ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.

    ಗಿರಿಜಾ ಮಾಚಕನೂರ, ಶಾರದಾ ರೋಣದ, ಶಾರದಾ ಹಳೇಮನಿ, ಸಿ.ಎಂ. ಮುಲ್ಲಾನವರ, ಲಕ್ಷ್ಮೀ ಗಾಯಕವಾಡ, ಬಿ.ಬಿ. ಗುಡಿಕಾರ, ಸುನಂದಾ ಬಾಗಲಕೋಟೆ, ಪಾರ್ವತಿ ಹುಯಿಲಗೊಳ, ಸುನಂದಾ ಶಿರೋಳ, ಪಾರ್ವತಿ ಜಾಮದಾರ, ಪ್ರೇಮಾ ಪಾಟೀಲ, ರೂಪಾ ಸಿ.ಎಸ್, ಕೆ.ಬಿ. ಪೂಜಾರ, ಪಿ.ಬಿ. ಹೂಗಾರ, ಭೀಮವ್ವ ನವಲಗುಂದ, ಕಮಲಾ ದೊಡಮನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts