More

    ಎಫ್​ಡಿಎ , ಎಸ್​ಡಿಎ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

    ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ಮತ್ತು ದ್ವೀತಿಯ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಕ್ರಿಯೆ ತಡೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಆಯ್ಕೆಯಾಗಿರುವ ಅಭ್ಯಥಿರ್ಗಳು ಸೋಮವಾರ ಆನಂದರಾವ್​ ವೃತ್ತದ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

    ಕರ್ನಾಟಕ ಲೋಕಸೇವಾ ಆಯೋಗ 2017-18ರಲ್ಲಿ 1,812 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿತ್ತು. ಆ ಪ್ರಕ್ರಿಯೆಯಲ್ಲಿ ಕೆಲ ಅಭ್ಯಥಿರ್ಗಳನ್ನು ಈಗಾಗಲೆ ವಿವಿಧ ಇಲಾಖೆಗಳಿಗೆ ನೇಮಕ ಮಾಡಲಾಗಿದೆ. ಉಳಿದ ಅಭ್ಯಥಿರ್ಗಳಿಗೆ ಸ್ಥಳ ನಿಯೋಜನೆ ಮಾಡಿ ಅಂತಿಮವಾಗಿ ಕರ್ತವ್ಯಕ್ಕೆ ಹಾಜರಾಗುವ ಆದೇಶ ಹೊರಡಿಸಬೇಕಿತ್ತು.

    ಆದರೆ, ಕರೊನಾ ಸೋಂಕಿನಿಂದ ಆಥಿರ್ಕ ನಷ್ಟವುಂಟಾಗಿದೆ ಎಂಬ ನೆಪವೊಡ್ಡಿ ಅವರ ನೇಮಕಾತಿಗೆ ತಡೆ ನೀಡಿ ಸರ್ಕಾರ ಆದೇಶಿಸಿದೆ. ಇದರಿಂದಾಗಿ ಆಯ್ಕೆಯಾದ ಅಭ್ಯಥಿರ್ಗಳಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ನೇಮಕಾತಿ ತಡೆ ನೀಡುವುದನ್ನು ಕೂಡಲೆ ತೆರವುಗೊಳಿಸಿ, ಎಲ್ಲರಿಗೂ ಕರ್ತವ್ಯಕ್ಕೆ ಹಾಜರಾಗುವ ಆದೇಶ ನೀಡಬೇಕು ಎಂದು ಆಗ್ರಹಿಸಿ ಅಭ್ಯಥಿರ್ಗಳು ಪ್ರತಿಭಟಿಸುತ್ತಿದ್ದಾರೆ.

    ಸ್ಪಂದಿಸುವವರೆಗೆ ಪ್ರತಿಭಟನೆ: ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪ್ರತಿಭನಾಕಾರರು ಗಾಂಧಿ ಪ್ರತಿಮೆ ಎದುರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಮಂಗಳವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವ ಅಭ್ಯಥಿರ್ಗಳು, ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts