More

    ಶಾಲಾ ಮಕ್ಕಳ ರಾಖಿ ಬಿಚ್ಚಿಸಿದರೆಂದು ಪಾಲಕರಿಂದ ಪ್ರತಿಭಟನೆ

    ಮಂಗಳೂರು: ಶಾಲಾ ಮಕ್ಕಳು ಧರಿಸಿದ್ದ ರಾಖಿಯನ್ನು ತರಗತಿಯಲ್ಲಿ ಶಿಕ್ಷಕರು ತೆಗೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಲಕರು ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಕಾಟಿಪಳ್ಳದಲ್ಲಿ ನಡೆದಿದೆ.

    ಕಾಟಿಪಳ್ಳದ ಖಾಸಗಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಘಟನೆ ನಡೆದಿದ್ದು, ಶಾಲಾ ನಿಯಮದ ಪ್ರಕಾರ ರಕ್ಷಾ ಬಂಧನ ಕಟ್ಟುವಂತಿಲ್ಲ ಎಂದು ಶಿಕ್ಷಕರು ಗುರುವಾರ ರಾಖಿ ಕಟ್ಟಿದ್ದ ಮಕ್ಕಳ ರಾಖಿಯನ್ನು ಬಿಚ್ಚಿಸಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಮಕ್ಕಳು ಪಾಲಕರಲ್ಲಿ ತಿಳಿಸಿದ್ದು, ಶುಕ್ರವಾರ ಬೆಳಗ್ಗೆ ಪರಿಸರದ 50ಕ್ಕೂ ಹೆಚ್ಚು ಪಾಲಕರು ಶಾಲೆಯ ಮುಂದೆ ಸೇರಿದ್ದಾರೆ. ಇದೇ ವೇಳೆ ವಿಷಯ ತಿಳಿದು ಸಂಘಟನೆ ಕಾರ್ಯಕರ್ತರು ಕೂಡ ಬಂದಿದ್ದು, ಹಿಂದು ಮಕ್ಕಳ ಭಾವನೆಗೆ ಧಕ್ಕೆ ತಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸುರತ್ಕಲ್ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದು ಪಾಲಕರನ್ನು ಸಮಾಧಾನಗೊಳಿಸಿದ್ದಾರೆ. ರಾಖಿಯನ್ನು ತೆಗೆಸಲು ಹೇಳಿರುವ ಶಿಕ್ಷಕರು ಬಂದು ಕ್ಷಮೆ ಕೇಳಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು.

    ಶಾಲಾಡಳಿತ ಮಂಡಳಿ ನೋಡಿಕೊಳ್ಳುವ ಫಾ.ಸಂತೋಷ್ ಲೋಬೊ ಸ್ಥಳಕ್ಕೆ ಬಂದು ರಾಖಿ ಕಟ್ಟುವುದಕ್ಕೇನು ನಮ್ಮ ಆಕ್ಷೇಪವಿಲ್ಲ. ಕೆಲವು ವಿದ್ಯಾರ್ಥಿಗಳು ಬಲವಂತದಿಂದ ರಾಖಿ ಕಟ್ಟಲು ಮುಂದಾಗಿದ್ದರು. ಇದರ ಬಗ್ಗೆ ಶಿಕ್ಷಕಿ ವಿರೋಧಿಸಿ ಗದರಿದ್ದರು ಅಷ್ಟೇ. ನಾವು ಎಲ್ಲರ ಭಾವನೆಯನ್ನೂ ಗೌರವಿಸುತ್ತೇವೆ ಎಂದು ಹೇಳಿ ಪಾಲಕರು ಮತ್ತು ಸೇರಿದ್ದ ಕಾರ್ಯಕರ್ತರಲ್ಲಿ ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳಿದ್ದಾರೆ. ಅಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts