More

    ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಿ

    ಕಮಲಾಪುರ: ಎಲ್ಲ ಅರ್ಹತೆ ಇರುವ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಗೊಂಡ (ಕುರುಬ) ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಆಗ್ರಹಿಸಿದರು.

    ಪಟ್ಟಣದ ತಹಸಿಲ್ ಕಚೇರಿ ಎದುರು ಕರ್ನಾಟಕ ಪ್ರದೇಶ ಗೊಂಡ ಸಂಘದಿಂದ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ೨೦೧೪ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಕೇಂದ್ರಕ್ಕೆ ಸಮರ್ಪಕ ವರದಿ ಸಲ್ಲಿಸಿದೆ. ಆದರೂ ಕೇಂದ್ರ ಸರ್ಕಾರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಬೀದರ್ ಜಿಲ್ಲೆಯಲ್ಲಿ ಗೊಂಡ ಕುರುಬ ಸಮಾಜ ಎಸ್‌ಟಿಯಲ್ಲಿದೆ. ಗೊಂಡ ಮತ್ತು ಕುರುಬ ಎರಡು ಒಂದೇ ಆಗಿದ್ದು, ಕುರುಬ ಸಮಾಜದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

    ಬಸ್ ನಿಲ್ದಾಣದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಲಾಯಿತು. ಪ್ರಮುಖರಾದ ಬಸವಂತರಾವ ಪಾಟೀಲ್, ಪರಮೇಶ್ವರ ಆಲಗೂರ, ಕುಪೆಂದ್ರ ಬರಗಾಲಿ, ರೇವಣಸಿದ್ದಪ್ಪ ಅಣಕಲ್, ಹಣಮಂತ ಪೂಜಾರಿ, ಶರಣು ಬೇಲೂರ, ಧರ್ಮರಾಜ ಹೆರೂರ, ಮಹಾದೇವಪ್ಪ ಪೂಜಾರಿ, ನರಸಪ್ಪ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts