More

    ಶಿಂಗಟಾಲೂರು ಗ್ರಾಮದಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ

    ಮುಂಡರಗಿ: ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮಂಗಳವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಹಮ್ಮಿಗಿಯಿಂದ ಮುಂಡರಗಿ ಭಾಗಕ್ಕೆ ತೆರಳುವ ಹಾಗೂ ಮುಂಡರಗಿಯಿಂದ ಹಮ್ಮಿಗಿ ಗ್ರಾಮಕ್ಕೆ ತೆರಳುವ ಸಾರಿಗೆ ಸಂಸ್ಥೆ ಬಸ್‌ಗಳು ಶಿಂಗಟಾಲೂರು ಮಾರ್ಗವಾಗಿ ಸಂಚರಿಸುತ್ತವೆ. ಆದರೆ, 15 ದಿನಗಳಿಂದ ಬೆಳಗಿನ ಸಮಯದಲ್ಲಿ ಬರುವ ಬಸ್‌ಗಳು ಪ್ರಯಾಣಿಕರು ತುಂಬಿರುತ್ತವೆ. ಇದರಿಂದ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ, ಕಾಲೇಜ್‌ಗೆ ಹೋಗದಂತಾಗಿದೆ. ಈ ಬಗ್ಗೆ ಮುಂಡರಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

    ಬೆಳಗ್ಗೆ 8.30ಕ್ಕೆ ಹೆಚ್ಚುವರಿಯಾಗಿ ಒಂದು ಬಸ್ ಓಡಿಸಬೇಕು. ಇದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಸಾರಿಗೆ ಡಿಪೋ ಸಹಾಯಕ ಕಾರ್ಯನಿರ್ವಾಹಕ ಅಧಿಕ್ಷಕ ಕೆ.ಎಸ್. ಜಿಗಳೂರು ಮಾತನಾಡಿ, ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಒಂದು ವಾರದಲ್ಲಿ ಅನುಕೂಲ ನೋಡಿಕೊಂಡು ಹೆಚ್ಚುವರಿಗೆ ಬಸ್ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಹಿರಿಯ ಅಧಿಕಾರಿಗಳ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

    ಗ್ರಾಪಂ ಸದಸ್ಯ ಸುನೀಲರಡ್ಡಿ ನೀರಲಗಿ, ಈರಣ್ಣ ವಾಲಿ, ದುರಗಪ್ಪ ಡಂಬಳ, ನಾಗರಾಜ ತಳವಾರ, ಮರಿಯಜ್ಜ ಹರಿಜನ, ರಂಗಪ್ಪ ಕಗ್ಗಲರ, ತೋಟಯ್ಯ ಹಿರೇಮಠ, ಮುತ್ತು ಭಜಂತ್ರಿ, ಕೊಟ್ರೇಶ ಬಾರಕೇರ, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts