More

    ಹೆಸ್ಕಾಂ ಕಚೇರಿ ಎದುರು ಹಲಗೆ ಬಾರಿಸಿ ಪ್ರತಿಭಟನೆ

    ಬಂಕಾಪುರ: ಹೋತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋತನಹಳ್ಳಿ, ಲಕ್ಕಿಕೊಪ್ಪ, ಶಿಡ್ಲಾಪುರ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಬಂಕಾಪುರ ಹೆಸ್ಕಾಂ ಕಚೇರಿ ಮುಂದೆ ಹಲಗೆ ಬಾರಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

    ಹೋತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ವಿದ್ಯುತ್ ವ್ಯತ್ಯಯದಿಂದಾಗಿ ಕುಡಿಯುವ ನೀರು ಮತ್ತು ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಕಳೆದ 15 ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಹೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಎಲ್ಲ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಆಗಮಿಸಿದ ಶಿಗ್ಗಾಂವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಬಿ. ಹೊಸಮನಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ನಿರಂತರ ಜ್ಯೋತಿ ಸಂಪರ್ಕದ ಕೇಬಲ್ ಸಮಸ್ಯೆಯಿಂದ ತೊಂದರೆಯಾಗಿದೆ. ನಾಳೆ ಬೇರೆ ಕೇಬಲ್ ಹಾಕಿ ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಿಬ್ಬಂದಿಗೆ ತಾಕೀತು ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಗ್ರಾಪಂ ಅಧ್ಯಕ್ಷ ಪ್ರವೀಣ ಗೂಳಣ್ಣವರ, ಬಸನಗೌಡ ಕೆಮ್ಮನಕೇರಿ, ಮಾಲತೇಶ ಮುಡೂರ, ನಾಗಪ್ಪ ಸವಣೂರ, ಸಿದ್ದನಗೌಡ ಪಾಟೀಲ, ಕಲ್ಲಪ್ಪ ಗಂಜಿಗಟ್ಟಿ, ಅಶೋಕ ಗುಳೇದ, ಪ್ರವೀಣ ಗುಳಣ್ಣವರ, ಸದಾನಂದ ಮಾದರ, ಫಕೀರಪ್ಪ ಆಸಾದಿ, ದ್ಯಾಮಣ್ಣ ಸವಣೂರ ಹಾಗೂ ಬಂಕಾಪುರ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts