More

    ಮೈಸೂರು-ಚನ್ನರಾಯಪಟ್ಟಣ ರಸ್ತೆಯಲ್ಲಿ ವಾಹನಗಳ ತಡೆದು ಪ್ರತಿಭಟನೆ

    ಕೆ.ಆರ್.ಪೇಟೆ: ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿರುವ ಪ್ರೊ.ಕೆ.ಎಸ್.ಭಗವಾನ್ ಮೊದಲು ನಾಡಿನ ಒಕ್ಕಲಿಗ ಸಮುದಾಯದವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ ಆಗ್ರಹಿಸಿದರು.

    ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ನೂರಾರು ಒಕ್ಕಲಿಗ ಮುಖಂಡರ ನೇತೃತ್ವದಲ್ಲಿ ವಾಹನಗಳ ಸಂಚಾರ ತಡೆದು, ಕೆ.ಎಸ್.ಭಗವಾನ್ ಪ್ರತಿಕೃತಿಯನ್ನು ದಹಿಸಿ ಘೊಷಣೆಗಳನ್ನು ಕೂಗಿದರು.

    ಮುಖಂಡ ಶಿವರಾಮೇಗೌಡ ಮಾತನಾಡಿ, ಮೈಸೂರಿನ ಮಹಿಷ ದಸರಾ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಲಘುವಾಗಿ ಸಮುದಾಯದ ಬಗ್ಗೆ ಮಾತನಾಡಿ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಭಗವಾನ್ ಅವರು ಮೊದಲು ಒಕ್ಕಲಿಗರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಪೋಲಿಸರು ಭಗವಾನ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಂಡು ಜೈಲಿಗೆ ಕಳಿಸಬೇಕು. ಸರ್ವ ಜನಾಂಗದ ಶಾಂತಿಯ ತೋಟದ ಆಧಾರದ ಮೇಲೆ ನಾವೆಲ್ಲರೂ ಸಹೋದರರಂತೆ ಒಂದಾಗಿ ಜೀವನ ನಡೆಸುತ್ತಿದ್ದೇವೆ. ಭಗವಾನ್ ಅವರಂತಹ ಸ್ವಾರ್ಥ ಸಾಧಕರು ಹಾಗೂ ಕಿಡಿಗೇಡಿಗಳಿಂದಾಗಿ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಪೊಲೀಸರು ಭಗವಾನ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಕಾಂಗ್ರೆಸ್ ಯುವ ಮುಖಂಡ ಚಿಕ್ಕೋನಹಳ್ಳಿ ಚೇತನಕುಮಾರ್, ಬಿಜೆಪಿ ಮುಖಂಡ ಶೀಳನೆರೆ ಭರತ್, ಮುಖಂಡರಾದ ಗೂಡೇಹೊಸಳ್ಳಿ ಜವರಾಯಿಗೌಡ, ಬಸ್ ಸಂತೋಷ್‌ಕುಮಾರ್, ಅಗ್ರಹಾರಬಾಚಹಳ್ಳಿ ಗ್ರಾಪಂ ಅಧ್ಯಕ್ಷ ದಿವಿಕುಮಾರ್, ದೊಡ್ಡಗಾಡಿಗನಹಳ್ಳಿ ಲೋಕೇಶ್, ಹೊನ್ನೇನಹಳ್ಳಿ ವೇಣು, ಕರವೇ ಕಾಂತರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts