More

    ಫೆ.22ರಂದು ಸಾಸ್ತಾನ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ

    ಕೋಟ: ಸಾಸ್ತಾನದಲ್ಲಿನ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳ ಸುಂಕ ವಿನಾಯಿತಿ ರದ್ದು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಫೆ.22ರಂದು ಟೋಲ ಫ್ಲಾಜಾ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯಿರಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
    80ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬಂದ್, ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಟೋಲ್ ಗೇಟ್ ಸಮೀಪದ ಪ್ರತಿಭಟನಾ ವೇದಿಕೆಯಲ್ಲಿ ಬಾಳ್ಕುದ್ರು ಮಠಾಧೀಶ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಸಂತ ಅಂತೋನಿ ಇಗರ್ಜಿ ಧರ್ಮಗುರು ರೆ.ಫಾ.ಜೋನ್ ವಾಲ್ಟರ್ ಮೆಂಡೋನ್ಸಾ, ಸಂತ ಥೋಮಸ್ ಇಗರ್ಜಿ ಧರ್ಮಗುರು ರೆ.ಫಾ.ನೋಯಲ್ ಲೂವಿಸ್, ಗುಂಡ್ಮಿ ಜುಮ್ಮಾ ಮಸೀದಿಯ ಮೌಲಾನಾ ರಿಜ್ವಾನ್, ಮೌಲಾನಾ ಮಹಮ್ಮದ್ ಆಲಿ ಸಹಾದಿ ಬರ್ವಾ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
    ಹಿಂದೆ ಸಾರ್ವಜನಿಕರು ಹೋರಾಟ ಮಾಡಿದಾಗ ಕೋಟ ಜಿಪಂ ವ್ಯಾಪ್ತಿಯ ಎಲ್ಲ ವಾಹನಗಳಿಗೆ ಟೋಲ್ ಸುಂಕ ವಿನಾಯಿತಿ ಘೋಷಿಸಲಾಗಿತ್ತು. ಈಗ ಫಾಸ್ಟ್ಯಾಗ್ ನೆಪದಲ್ಲಿ ಈ ಸೌಲಭ್ಯ ಕಿತ್ತುಕೊಂಡಿರುವುದರ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿದೆ. ಹೆದ್ದಾರಿ ಕಾಮಗಾರಿ ಆರಂಭಗೊಂಡು 12 ವರ್ಷವಾದರೂ ಸರ್ವೀಸ್ ರಸ್ತೆ ಆಗಿಲ್ಲ, ಅವೈಜ್ಞಾನಿಕ ರಸ್ತೆ ವಿಭಜಕ ಮತ್ತು ಅಂಡರ್‌ಪಾಸ್‌ಗಳು, ಮತ್ತಿತರ ಅವ್ಯವಸ್ಥೆ ಹಾಗೆಯೇ ಇದೆ. ಇವೆಲ್ಲ ವಿಚಾರಗಳನ್ನಿಟ್ಟು ಹೋರಾಟ ನಡೆಯಲಿದೆ ಎಂದರು.
    ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರಾದ ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಭೋಜ ಪೂಜಾರಿ, ಸಂದೀಪ್ ಕುಂದರ್, ಅಚ್ಯುತ್ ಪೂಜಾರಿ, ಸಹದೇವ್ ಪೂಜಾರಿ, ಸಮಿತಿ ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts