More

    ಜೈನ ಮುನಿ ಹತ್ಯೆ ಖಂಡಿಸಿ ಪ್ರತಿಭಟನೆ

    ಬಸವನಬಾಗೇವಾಡಿ: ಜೈನ ಮುನಿ ಆಚಾರ್ಯ 108 ಕಾಮಕುಮಾರ ಮುನಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಹಿರೇಮಠದ ಶ್ರೀಗಳ ನೇತತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ತಾಲೂಕು ಜೈನ ಬಾಂಧವರು ಬಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

    ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಜಮಾಯಿಸಿದ ಪಟ್ಟಣದಲ್ಲಿ ಹಿರೇಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಹಾಗೂ ತಾಲೂಕು ಜೈನ ಬಾಂಧವರು ಜೈನ ಮುನಿ ಆಚಾರ್ಯ 108 ಕಾಮಕುಮಾರ ಮುನಿ ಮಹಾರಾಜರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಘೋಷಣೆ ಕೂಗುತ್ತಾ ತಹಸೀಲ್ದಾರ ಕಚೇರಿಗೆ ತರಳಿದರು. ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಕೆಲ ಹೊತ್ತು ಪ್ರತಿಭಟನೆ ಮಾಡಿದರು.

    ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಮಾತನಾಡಿದವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಖೊಡಿ ಗ್ರಾಮದ ಜೈನ ಮಠದ ಜೈನಮುನಿ ಕಾಮಕುಮಾರವರು ಅಹಿಂಸಾ ಧರ್ಮವೇ ಪರಮೋಧರ್ಮ ಎಂದು ನಂಬಿದ ಇಂಥಹ ಸ್ವಾಮೀಜಿಯವರನ್ನು ಚಿತ್ರ ಹಿಂಸೆ ಮಾಡಿ ಹತ್ಯೆ ಮಾಡಿರುವುದು ಖಂಡನಾರ್ಹ. ಈ ಹತ್ಯೆ ಇಡೀ ಸಮಾಜವೇ ತಲೆ ತಗ್ಗಿಸುವಂಥಾಗಿದೆ ಎಂದರು.

    ಸಮಾಜದ ಸ್ವಾಸ್ತತ್ಯ ಚೆನ್ನಾಗಿರಬೇಕೆಂದರೆ ಮಠಮಾನ್ಯಗಳು ಅತ್ಯಗತ್ಯವಾಗಿದ್ದು. ಆದಿ ಅನಾದಿ ಕಾಲದಿಂದಲೂ ದೇಶ ಮತ್ತು ರಾಜ್ಯದಲ್ಲಿ ಅನೇಕ ಮಠಮಾನ್ಯಗಳು ಉಳ್ಳವರಿಂದ, ದಾನಿಗಳಿಂದ ಹಣ ಪಡೆದು ಆ ಹಣದಿಂದ ಶಿಕ್ಷಣ, ದಾಸೋಹ, ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿರುವ ನೂರಾರು ಮಠ ಮಾನ್ಯಗಳು ಹಾಗೂ ಆಶ್ರಮಗಳಿವೆ. ಅಂತಹ ಮಠ ಆಶ್ರಮಗಳ ಸನ್ಯಾಸಿಗಳಿಗೆ ಇಂದು ಇಂತಹ ಘಟನೆಯಿಂದ ಅನೇಕ ಸನ್ಯಾಸಿಗಳು ಆತಂಕದಲ್ಲಿ ಸಮಾಜ ಸೇವೆ ಮಾಡುವಂತ ಕಾರ್ಯವಾಗುತ್ತಿದೆ. ಆದ್ದರಿಂದ ಸರ್ಕಾರ ತಕ್ಷಣ ಈ ಕತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕತ್ಯ ಏಸಗಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ನೀಡಬೇಕು ಮತ್ತು ಮಠಮಾನ್ಯಗಳಿಗೆ ಆಶ್ರಮಗಳಿಗೆ ಭದ್ರತೆಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಕರವೆ ಜಿಲ್ಲಾ ಉಪಾಧ್ಯಕ್ಷ ಅಶೋಕ ಹಾರಿವಾಳ, ವಿವೇಕ ಬ್ರಿಗೇಡ್ ವಿನೂತ ಕಲ್ಲೂರ, ರವಿಗೌಡ ಚಿಕ್ಕೊಂಡ, ಸುರೇಶ ಹಾರಿವಾಳ, ಜೈನ ಸಮಾಜದ ತಾಲೂಕಾಧ್ಯಕ್ಷ ಅಪ್ಪು ದಂಡಾವತಿ, ಸುನೀಲ ದುಂಬಾಳಿ, ವೆಂಕಟೇಶ ಒಣರೊಟ್ಟಿ ಜೈನ ಸಮಾಜದ ಬಾಂಧವರಾದ ಸಾಗರ ಉಪಾಧ್ಯ, ಪ್ರವೀಣ ದಂಡಾವತಿ, ಪಾರೀಶನಾಥ ಹೊಸಮನಿ, ಜೈನ ಮಹಿಳಾ ಸಂಘದ ಅಧ್ಯಕ್ಷ ಸುನಂದಾ ದಂಡಾವತಿ, ಸುರೇಖಾ ಉಪಾಧ್ಯ, ಅರ್ಚನಾ ದಂಡಾವತಿ, ಸುನೀತಾ ದಂಡಾವತಿ, ಸುಮತಿ ಹೊಸಮನಿ, ಪ್ರಿಯಾಂಕಾ ಹೊಸಮನಿ, ಅನೇಕರು ಭಾಗವಹಿಸಿದ್ದರು. ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ದುಂಡಪ್ಪಾ ಕೊಮಾರವರಿಗೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts