More

    ಸಾಗರಮಾಲಾ ಯೋಜನೆಗೆ ವಿರೋಧ: ಬೆಂಗರೆಯಲ್ಲಿ ದೋಣಿಯಲ್ಲಿ ಮೀನುಗಾರರಿಂದ ಪ್ರತಿಭಟನೆ

    ಮಂಗಳೂರು: ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಾಗರಮಾಲಾ ಯೋಜನೆ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಕಾರ್ಪೊರೆಟ್ ಕಂಪನಿಗಳ ಪಾಲಾಗಿಸುವ ಹುನ್ನಾರ ಹೊಂದಿದೆ. ಇದನ್ನು ಅವಲಂಬಿಸಿರುವ ಲಕ್ಷಾಂತರ ಮೀನುಗಾರರನ್ನು ಬೀದಿಪಾಲು ಮಾಡುವ ಈ ಯೋಜನೆ ಜಾರಿ ಮಾಡಬಾರದು ಎಂದು ಸಾಂಪ್ರದಾಯಿಕ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಸರ್ಕಾರವನ್ನು ಒತ್ತಾಯಿಸಿದರು.

    ಬೆಂಗರೆಯಲ್ಲಿ ಶುಕ್ರವಾರ ಸಾಗರಮಾಲಾ, ಕೋಸ್ಟಲ್ಬರ್ತ್ ಯೋಜನೆ ವಿರುದ್ಧ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ ಹಮ್ಮಿಕೊಂಡಿದ್ದ ದೋಣಿಯೊಂದಿಗೆ ಮೀನುಗಾರರ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.

    ಬೆಂಗರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ನಾಡದೋಣಿಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಸಾಗರಮಾಲಾ, ಕೋಸ್ಟಲ್ಬರ್ತ್ ಯೋಜನೆ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಾಶಗೊಳಿಸುತ್ತಿದೆ. ಯೋಜನೆಗೆ ಸಂಬಂಧಿಸಿ ಸ್ಥಳೀಯರಿಗೆ ಮಾಹಿತಿ ನೀಡದೆ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಇದರ ವಿರುದ್ಧ ಮೀನುಗಾರ ಸಮುದಾಯ ಹೋರಾಟಕ್ಕೆ ಇಳಿದಿದೆ ಎಂದರು.

    ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ ಅಧ್ಯಕ್ಷ ಅಬ್ದುಲ್ ತಯ್ಯೂಬ್, ಸಲಹೆಗಾರ ನೌಷದ್ ಬೆಂಗರೆ, ಡಿವೈಎಫ್‌ಐ ಮುಖಂಡರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಹನೀಫ್ ಬೆಂಗರೆ, ತೌಸೀಫ್, ನಾಸಿರ್, ಖಲೀಲ್ ಬೆಂಗರೆ, ಮೀನುಗಾರ ಮುಖಂಡರಾದ ಅನ್ವರ್, ಇಸ್ಮಾಯಿಲ್, ಸಾದಿಕ್, ಪಿ.ಜಿ.ರಫೀಕ್, ಇಬ್ರಾಹಿಂ ಖಲೀಲ್, ಫಯಾಜ್, ಅಜೀಜ್, ಸರ್ಫರಾಜ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts