More

    ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ

    ಇಂಡಿ: ಮಕ್ಕಳಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಿ, ಸಾಧನೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಲು ನಾಗರಿಕ ಸಮಾಜದ ಪ್ರತಿಯೊಬ್ಬರು ಮುಂದಾಗಬೇಕು ಎಂದು ಪರಶುರಾಮ ಹೊಸಮನಿ ಹೇಳಿದರು.

    ಅವರು ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಪ್ತಗಿರಿ ಫೌಂಡೇಷನ್ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಯ ಕಾನೂನು ಅರಿವು ಮೂಡಿಸುವ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ಮಕ್ಕಳು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು.

    ಮ್ಮ ಜೀವನದಲ್ಲಿ ಹಲವು ಕಷ್ಟ ಸವಾಲುಗಳನ್ನು ಅನುಭವಿಸಿದ ಅವರು ಸಂವಿಧಾನ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್ ಮಾನವತಾವಾದಿಯಾಗಿದ್ದಾರೆ. ತಮ್ಮ ಜೀವಿತದುದ್ದಕ್ಕೂ ಶಿಕ್ಷಣಕ್ಕೆ ಮೊದಲಾದ್ಯತೆ ನೀಡಿದ ಅಂಬೇಡ್ಕರ್‌ರು ನಮಗೆಲ್ಲ ಆದರ್ಶಪ್ರಾಯರು ಎಂದರು.

    ಯುವ ಮುಖಂಡ ಸಂತೋಷ ಕೋಟಗೊಂಡ, ಮುಖ್ಯಶಿಕ್ಷಕ ಅನಿಲ ಪತಂಗಿ, ವಿ.ವೈ. ಪತ್ತಾರ, ಎ.ಎಂ. ಬೆದ್ರೇಕರ, ಎಸ್.ಆರ್. ಚಾಳೇಕರ, ಎಸ್.ಎಂ. ಪಂಚಮುಖಿ, ಎಸ್.ಎಸ್. ಅರಬ, ಎಸ್.ಡಿ. ಬಿರಾದಾರ, ಎಸ್.ಬಿ. ಕುಲಕರ್ಣಿ, ಎಸ್.ಪಿ. ಪೂಜಾರಿ, ಜೆ.ಎಂ. ಪತಂಗಿ, ಸಾವಿತ್ರಿ ಸಂಗಮದ, ಎನ್.ಬಿ. ಚೌಧರಿ, ಜೆ.ಸಿ ಗುಣಕಿ, ಎಸ್.ಎನ್. ಡಂಗಿ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಎಫ್.ಎ. ಹೊರ್ತಿ ಇತರರಿದ್ದರು.

    ನಂತರ ಕಲಾವಿದರಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಯ ಕಾನೂನು ಅರಿವು ಮೂಡಿಸುವ ನಾಟಕ ಪ್ರದರ್ಶನ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts