More

    ಕರೊನಾ ವಿರುದ್ಧ ಹೋರಾಡುವಲ್ಲಿ ಗಂಗಾ ಜಲ ಅಧ್ಯಯನಕ್ಕೆ ಹೆಚ್ಚಿನ ಪುರಾವೆ ಕೇಳಿದ ಐಸಿಎಂಆರ್

    ನವದೆಹಲಿ: ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಗಂಗಾ ನದಿಯ ನೀರನ್ನು ಬಳಸಬಹುದೇ ಎಂಬುದರ ಬಗ್ಗೆ ವೈದ್ಯಕೀಯ ಸಂಶೋಧನೆ ನಡೆಸುವಂತೆ ಜಲ ಶಕ್ತಿ ಸಚಿವಾಲಯ ಸಲ್ಲಿಸಿದ ಪ್ರಸ್ತಾಪವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿರಸ್ಕರಿಸಲು ನಿರ್ಧರಿಸಿದೆ.
    ಈ ಕುರಿತು ಐಸಿಎಂಆರ್​ನ ಸಂಶೋಧನಾ ಪ್ರಸ್ತಾವನೆಗಳ ಮೌಲ್ಯಮಾಪನ ಸಮಿತಿಯ ಮುಖ್ಯಸ್ಥ ಡಾ. ವೈ. ಕೆ. ಗುಪ್ತಾ ಮಾತನಾಡಿ, ಪ್ರಸ್ತುತ ಲಭ್ಯವಿರುವ ದಾಖಲೆಗಳು ಮತ್ತು ದತ್ತಾಂಶಗಳು ಕರೊನಾ ಚಿಕಿತ್ಸೆಗಾಗಿ ಗಂಗಾ ಜಲ ಕುರಿತ ವೈದ್ಯಕೀಯ ಅಧ್ಯಯನಕ್ಕೆ ಬಲವಾದ ದಾಖಲೆಗಳಾಗಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಹಿಜ್ಬುಲ್ ಮುಜಾಹಿದ್ದೀನ್ ನಾಯಕನ ಸಂತಾಪ ಸಭೆಯಲ್ಲಿ ಉಗ್ರರು ಮಾಡಿದ ಶಪಥ ಏನು?

    ಕರೊನಾ ವಿರುದ್ಧ ಹೋರಾಡುವಲ್ಲಿ ಗಂಗಾ ಜಲ ಬಳಕೆ ಕುರಿತು ಅಧ್ಯಯನಕ್ಕೆ ಸ್ವಚ್ಛ ಗಂಗಾ ಅಭಿಯಾನ (ಎನ್​ಎಂಸಿಜಿ) ಕ್ಕೆ ಹಲವು ಪ್ರಸ್ತಾಪಗಳು ಬಂದಿದ್ದು, ಅವುಗಳನ್ನು ಐಸಿಎಂಆರ್​ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಪ್ರಸ್ತುತ ಪ್ರಸ್ತಾವನೆಗಳಿಗೆ ಹೆಚ್ಚಿನ ವೈಜ್ಞಾನಿಕ ದತ್ತಾಂಶಗಳು, ಪುರಾವೆಗಳು ಹಾಗೂ ಬಲವಾದ ಹಿನ್ನೆಲೆ ಅಗತ್ಯವಾಗಿದ್ದು, ಇದನ್ನು ಎನ್​ಎಂಸಿಜಿಗೆ ತಿಳಿಸಲಾಗಿದೆ ಎಂದಿದ್ದಾರೆ ಗುಪ್ತಾ,
    ರಾಷ್ಟ್ರೀಯ ಪರಿಸರೀಯ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್​ಇಇಆರ್​ಐ) ತಜ್ಞರೊಂದಿಗೆ ಈ ಪ್ರಸ್ತಾಪಗಳ ಕುರಿತು ಎನ್​​ಎಂಸಿಜಿ ಚರ್ಚಿಸಿದೆ.
    ಎನ್​ಎಂಸಿಜಿ ಮತ್ತು ಎನ್​​ಇಇಆರ್​ಐ ಮಧ್ಯೆ ನಡೆದ ಸಮಾಲೋಚನೆ ಸಂದರ್ಭದಲ್ಲಿ ಗಂಗಾ ಜಲ ಅಥವಾ ಮಣ್ಣನಿನಲ್ಲಿ ವೈರಾಣು ನಿರೋಧಕ ಗುಣಲಕ್ಷಣಗಳಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಎನ್​ಇಇಆರ್​ಐ ವಿಜ್ಞಾನಿಗಳು ತಿಳಿಸಿದ್ದಾರೆ. (ಏಜನ್ಸೀಸ್)

    ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts