More

    ರಾಷ್ಟ್ರೀಯ ಸ್ಪರ್ಧೆಗೆ ವಿಡಿಐಟಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ಆಯ್ಕೆ

    ಹಳಿಯಾಳ: ಹಳಿಯಾಳದ ಕೆಎಲ್‌ಎಸ್ ವಿಡಿಐಟಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಾಜೆಕ್ಟ್ ರಾಷ್ಟ್ರೀಯ ಮಟ್ಟದ ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದೆ ಎಂದು ಪ್ರಾಚಾರ್ಯ ಡಾ.ವಿ.ಎ. ಕುಲಕರ್ಣಿ ತಿಳಿಸಿದ್ದಾರೆ.

    ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಾದ ಆಶಿಶ್ ಜಿ., ಕೀರ್ತಿ ಎಸ್., ಶಾಂಭವಿ ಪಿ. ಮತ್ತು ಅಮೃತಾ ಅವರು ಪ್ರೊ. ವಿಜಯಲಕ್ಷ್ಮೀ ಕಲಾಲ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿರುವ ಸ್ಮಾರ್ಟ್‌ಗ್ರೀನ್ ಹೌಸ್ ಫಾರ್ಮಿಂಗ್ ಪ್ರಾಜೆಕ್ಟ್ ಬೆಂಗಳೂರಿನ ಕ್ವೆಸ್ಟ್ ಗ್ಲೋಬಲ್ ಸರ್ವಿಸ್ ಪ್ರೈ. ಲಿ. ಅವರು ಆಯೋಜಿಸಿರುವ ಪ್ರಾಜೆಕ್ಟ್ ಪ್ರದರ್ಶನ ಸ್ಪರ್ಧೆ ಇಂಗೆನಿಯಂ-2023ರಲ್ಲಿ ಆಯ್ಕೆಗೊಂಡಿದೆ. ದೇಶದಾದ್ಯಂತ 1300 ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಅತ್ಯುತ್ತಮ 10 ಪ್ರಾಜೆಕ್ಟ್ ಪ್ರದರ್ಶನಗೊಳ್ಳಲಿದ್ದು, ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಸೇರಿದೆ ಎಂದು ತಿಳಿಸಿದ್ದಾರೆ.
    ವಿದ್ಯಾರ್ಥಿಗಳು ತಯಾರಿಸಿದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಜೆಕ್ಟ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಹರ್ಷ ತಂದಿದೆ ಎಂದು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಲೋಕೂರ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts