More

    ‘RRR’​​ ರೀತಿಯಲ್ಲೇ ‘ಪ್ರಾಜೆಕ್ಟ್ ಕೆ’ ಚಿತ್ರವನ್ನು ಪ್ರಚಾರ ಮಾಡಲು ಸಜ್ಜಾದ ಪ್ರಭಾಸ್-ನಾಗ್ ಅಶ್ವಿನ್?

    ಆಂಧ್ರಪ್ರದೇಶ: ಟಾಲಿವುಡ್​​​ನ ರೆಬಲ್​​ ಸ್ಟಾರ್​​, ಡಾರ್ಲಿಂಗ್​​ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರ ಕಾಂಬಿನೇಷ್​​ನಲ್ಲಿ ಮೂಡಿಬರುತ್ತಿರುವ ‘ಪ್ರಾಜೆಕ್ಟ್ ಕೆ’ ಚಿತ್ರದ ಪ್ರಚಾರ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಚಿತ್ರತಂಡ ಸಜ್ಜಾಗಿದೆ ಎಂಬ ಸುದ್ದಿ ಇದೀಗ ಚಿತ್ರರಂಗದಲ್ಲಿ ಹರಿದಾಡುತ್ತಿದೆ.

    ಇದನ್ನೂ ಓದಿ: ಕಕ್ಕರಗೊಳ್ಳ ಆರೋಗ್ಯ ಕೇಂದ್ರಕ್ಕೆ ಆಯುಷ್ಮಾನ್ ಕಾಯಕಲ್ಪ

    ಶೀಘ್ರದಲ್ಲೇ ‘ಪ್ರಾಜೆಕ್ಟ್ ಕೆ’ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಅನ್ನು ಲಾಂಚ್ ಮಾಡಲು ವಿಭಿನ್ನ ಪ್ರಯತ್ನಗಳತ್ತ ಸಾಗಿದೆ. ದೊಡ್ಡ ಬಜೆಟ್‌ನಲ್ಲಿ ಸೈನ್ಸ್​-ಫಿಕ್ಷನ್​​ (Sci-Fi) ಥ್ರಿಲ್ಲರ್‌ ಹೊಂದಿರುವ ಈ ಚಿತ್ರಕ್ಕೆ, ಬಿಡುಗಡೆಗೂ ಮುನ್ನ ಹಾಲಿವುಡ್ ಅಂಗಳದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲು ಚಿತ್ರತಂಡ ಯೋಜಿಸಿದೆ ಎಂದು ವರದಿ ಹೇಳಿದೆ.

    ಈ ಹಿಂದೆ ನಿರ್ದೇಶಕ ರಾಜಮೌಳಿ ಅವರ ಆರ್​ಆರ್​​ಆರ್​​ ಚಿತ್ರವು ಬಿಡುಗಡೆಗೂ ಮುನ್ನ ಮತ್ತು ರಿಲೀಸ್ ಬಳಿಕ ಹಲವು ಆಂಗ್ಲ ಮಾಧ್ಯಮಗಳ ಜತೆ ವಿಶೇಷ ಸಂದರ್ಶನ, ಮಾತುಕತೆಯಲ್ಲಿ ಭಾಗಿಯಾಗಿತ್ತು. ಇದೇ ರೀತಿಯಲ್ಲಿ ಪ್ರಾಜೆಕ್ಟ್​​ ಕೆ ಸಿನಿಮಾದ ಪ್ರಚಾರವನ್ನು ವಿದೇಶದ ಮಟ್ಟದಲ್ಲಿ ಮಾಡಬೇಕು ಎಂಬುದು  ಚಿತ್ರತಂಡದ ಗುರಿಯಾಗಿದೆ ಎಂದು ಇತ್ತೀಚಿನ ವರದಿ ಹೇಳಿದೆ(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts