More

    ವಿಧ್ವಂಸಕ ಕೃತ್ಯ ಶಂಕೆಯಿಂದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಮೊಟಕು

    ಚಿಕ್ಕಮಗಳೂರು: ವಿವಾದ ಮತ್ತು ಮುಂದೂಡಿಕೆಯ ಒತ್ತಡದ ನಡುವೆಯೂ ಶೃಂಗೇರಿಯಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ ಸಮ್ಮೇಳನಕ್ಕೆ ಚಾಲನೆ ನೀಡಿ ದಿನದ ಗೋಷ್ಠಿಗಳನ್ನು ನಡೆಸಲಾಯಿತಾದರೂ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆ ಭೀತಿಯಿಂದ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮವನ್ನು ಮುಂದೂಡಲಾಯಿತು ಎಂದು ಗೊತ್ತಾಗಿದೆ.

    ಟೈರ್​ಗಳಿಗೆ ಬೆಂಕಿ ಹಚ್ಚಿ, ಪೆಟ್ರೋಲ್ ಬಾಂಬ್ ದಾಳಿ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಸ್ವಾಗತ ಸಮಿತಿಯು ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

    ಸಮ್ಮೇಳನ ಮುಂದೂಡುವಂತೆ ಪೊಲೀಸರು ನೀಡಿದ್ದ ನೊಟೀಸನ್ನು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಲಾಗಿದ್ದು, ಈ ಅರ್ಜಿ ಜ.17ರಂದು ವಿಚಾರಣೆಗೆ ಬರಲಿದೆ. ಅಂದು ಯಾವ ರೀತಿಯ ನಿರ್ದೇಶನ ಬರುತ್ತದೆಂಬ ಕುತೂಹಲವೂ ಇದೆ.

    ಸಮ್ಮೇಳನ ಸಭಾಂಗಣ ಸಮೀಪದಲ್ಲೇ ಶುಕ್ರವಾರ ಮಧ್ಯಾಹ್ನ ಪೆಟ್ರೋಲ್ ಬಾಂಬ್ ತಯಾರಿಸುವ ಪರಿಕರಗಳು ಸಿಕ್ಕಿವೆ. ಟೈರ್​ಗೆ ಬೆಂಕಿ ಹಚ್ಚಿ ದೊಂಬಿ ಉಂಟುಮಾಡುವ ಪ್ರಯತ್ನವೂ ನಡೆದಿದೆ. ಇಷ್ಟೆಲ್ಲ ಪ್ರತಿರೋಧ ಇದ್ದರೂ ಎರಡನೇ ದಿನದ ಸಮ್ಮೇಳನ ರದ್ದುಪಡಿಸದಿದ್ದರೆ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದು ಪೊಲೀಸರು ಖಡಕ್ ಸೂಚನೆ ನೀಡಿದ್ದರಿಂದ ಸ್ವಾಗತ ಸಮಿತಿ ಕೊನೆಯ ದಿನದ ಕಾರ್ಯಕ್ರಮ ಮುಂದೂಡಿದೆ ಎಂದು ಗೊತ್ತಾಗಿದೆ.

    ಯಾವುದೇ ಸಮ್ಮೇಳನದ ಸಮಾರೋಪದಲ್ಲಿ ಕೈಗೊಳ್ಳುವ ನಿರ್ಣಯಗಳು ಪ್ರಮುಖವಾಗುತ್ತವೆ. ಮೊದಲ ದಿನದ ಸಮ್ಮೇಳನದಲ್ಲಿ ಜಿಲ್ಲೆಯ ನೆಲ, ಜಲ, ಜನ, ಪರಿಸರದ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಕನ್ನಡ ಹಬ್ಬದ ಜಾತ್ರೆಗೆ ಬಹಿರಂಗವಾಗಿ ವಿರೋಧ ಮಾಡಿದ ಸರ್ಕಾರದ ಬಗ್ಗೆಯೂ ಪ್ರಗತಿಪರ ಸಾಹಿತಿಗಳು ಕಿಡಿಕಾರಿದ್ದಾರೆ. ಹೀಗಾಗಿ ಮುಂದೂಡಲ್ಪಟ್ಟಿರುವ ಎರಡನೇ ದಿನದ ಸಮ್ಮೇಳನವನ್ನು ಸೂಕ್ತವಾದ ದಿನ ನಡೆಸಬೇಕೆಂಬ ಅಭಿಪ್ರಾಯಕ್ಕೆ ತಾಲೂಕು ಕಸಾಪ ಪದಾಧಿಕಾರಿಗಳು ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts