More

    ವೃತ್ತಿಪರ ಹಾಸ್ಟೆಲ್ ಆರಂಭಿಸಲು ಆಗ್ರಹ: ಗಂಗಾವತಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ

    ಗಂಗಾವತಿ: ವೃತ್ತಿಪರ ಹಾಸ್ಟೆಲ್‌ಗಳ ಆರಂಭಕ್ಕೆ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಗುರುವಾರ ನಗರದ ತಾಲೂಕಾಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಅನಂತ ಜೋಶಿಗೆ ಮನವಿ ಸಲ್ಲಿಸಿದರು.

    ಸಮಿತಿ ಅಧ್ಯಕ್ಷ ಅಮರೇಶ ಕಡಗದ್ ಮಾತನಾಡಿ, ವೃತ್ತಿಪರ ಕೋರ್ಸ್ ಕಲಿಯುವ ಉದ್ದೇಶದಿಂದ ಗ್ರಾಮೀಣ ಭಾಗದಿಂದ ನೂರಾರು ವಿದ್ಯಾರ್ಥಿಗಳು ನಗರಕ್ಕೆ ಬರುತ್ತಿದ್ದು, ನರ್ಸಿಂಗ್, ಐಟಿಐ, ಇಂಜಿನಿಯರಿಂಗ್, ಾರ್ಮಸಿ, ಕಾನೂನು ಮತ್ತು ಬಿಇಡಿ ಕೋರ್ಸ್‌ಗಳತ್ತ ಗಮನಹರಿಸಿದ್ದಾರೆ. ಆದರೆ, ವೃತ್ತಿಪರ ಹಾಸ್ಟೆಲ್‌ಗಳ ಕೊರತೆಯಿಂದ ದುಬಾರಿ ಶುಲ್ಕದ ಪಿಜಿ(ಪೇಯಿಂಗ್ ಗೆಸ್ಟ್)ಯಲ್ಲಿ ಉಳಿಯುವ ಸ್ಥಿತಿ ಬಂದಿದೆ. ಮಾಸಿಕ ಕನಿಷ್ಠ 5ಸಾವಿರ ರೂ.ವೆಚ್ಚವಾಗುತ್ತಿದ್ದು, ಅಧ್ಯಯನ ಶುಲ್ಕಕ್ಕಿಂತ ಹೆಚ್ಚಿನ ಹಣ ವ್ಯಯಿಸಬೇಕಿದೆ. ಬಡ ಕುಟುಂಬದಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ವೃತ್ತಿಪರ ಕೋರ್ಸ್‌ಗಳ ಹಾಸ್ಟೆಲ್‌ಗಳ ಮಂಜೂರಾತಿಗೆ ಸರ್ಕಾರ ಗಮನಹರಿಸಿ ಬಜೆಟ್‌ನಲ್ಲಿ ೋಷಿಸಬೇಕು ಎಂದು ಒತ್ತಾಯಿಸಿದರು.

    ಪದಾಧಿಕಾರಿಗಳಾದ ಶಿವಕುಮಾರ, ರಾಜಭಕ್ಷಿ, ಶಂಕರ, ಜಾವೇದ್, ಹರ್ಷಿತ್ ಗೌಡ, ಮನೋಜಕುಮಾರ, ಸೈಯದ್ ಮೆಹಬೂಬ್,ಆದರ್ಶ ದೇಸಾಯಿ, ರುದ್ರೇಶ, ವಿನಾಯಕ, ಅನಿಕೇತ, ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts