More

    ಪ್ರೊ.ಅರಬಿಗೆ ವೃತ್ತಿಯಿಂದ ವಜಾ ಶಿಕ್ಷೆ, ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ

    ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರೊ.ಅರಬಿ ಅವರನ್ನು ಸೇವೆಯಿಂದಲೇ ವಜಾಗೊಳಿಸುವ ನಿರ್ಧಾರವನ್ನು ವಿವಿ ಸಿಂಡಿಕೇಟ್ ಸಭೆ ಕೈಗೊಂಡಿದೆ.
    ಬುಧವಾರ ಈ ಪ್ರಕರಣದ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ಪ್ರೊ.ಅರಬಿಗೆ ವೃತ್ತಿ ಬಹಿಷ್ಕಾರ ಶಿಕ್ಷೆ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಇದರ ಮೊದಲ ಹಂತವಾಗಿ ಪ್ರೊ.ಅರಬಿಗೆ ನೋಟಿಸ್ ನೀಡಲು ವಿವಿ ಆಡಳಿತ ಮಂಡಳಿ ಸೂಚಿಸಿದೆ.

    ರಾಜ್ಯ ಸರ್ಕಾರಕ್ಕೆ ಮಾಹಿತಿ: 2018ರ ಏಪ್ರಿಲ್‌ನಲ್ಲಿ ವಿವಿ ಅರ್ಥಶಾಸ ಪ್ರಾಧ್ಯಾಪಕ ಪ್ರೊ.ಅರಬಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಂಶೋಧನಾ ವಿದ್ಯಾರ್ಥಿನಿಯೋರ್ವಳು ಸಾಕ್ಷ್ಯ ಸಹಿತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಆಯೋಗ ವಿವಿಗೆ ನೋಟಿಸ್ ನೀಡಿತ್ತು. ನಂತರ ತನಿಖೆಗಾಗಿ ವಿಶೇಷ ತಂಡ (ಐಸಿಸಿ) ರಚಿಸಿ ವರದಿ ನೀಡುವಂತೆ ವಿವಿ ಆಡಳಿತ ಸಮಿತಿ ಆದೇಶ ನೀಡಿತ್ತು.

    2018ರ ಡಿಸೆಂಬರ್‌ನಲ್ಲಿ ಪ್ರೊೆಸರ್ ಮೇಲಿನ ಆರೋಪಗಳ ಬಗ್ಗೆ ಐಸಿಸಿಯು ಮುಚ್ಚಿದ ಲಕೋಟೆ ಮೂಲಕ ಅಂದಿನ ಕುಲಸಚಿವ ಪ್ರೊ.ಎ.ಎಂ ಖಾನ್‌ಗೆ ತನಿಖಾ ವರದಿ ನೀಡಿತ್ತು. ಆದರೆ 2020ರ ಸೆಪ್ಟೆಂಬರ್ ಕೊನೇ ವಾರದವರೆಗೂ ತನಿಖಾ ವರದಿ ತೆರೆಯದೆ ಮುಚ್ಚಿದ ಲಕೋಟೆಯಲ್ಲೇ ಬಿದ್ದಿತ್ತು.

    ಇತ್ತೀಚೆಗೆ ಮಹಿಳಾ ಆಯೋಗದಿಂದ ವರದಿ ಕೇಳಿದ್ದರಿಂದ ನೂತನ ಕುಲಸಚಿವ ರಾಜು ಮೊಗವೀರ ತನಿಖಾ ವರದಿಯನ್ನು ಸಿಂಡಿಕೇಟ್ ಸಮಿತಿ ಮುಂದಿರಿಸಿದ್ದು, ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತ್ತು.

    ಖಾನ್ ವಿರುದ್ಧ ಸರ್ಕಾರಕ್ಕೆ ದೂರು: ವಿಶೇಷ ತಂಡ ತನಿಖೆ ನಡೆಸಿ ಸಲ್ಲಿಸಿದ್ದ ವರದಿಯ್ನು ಮುಚ್ಚಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಅಂದಿನ ಕುಲಸಚಿವ ಪ್ರೊ.ಎ.ಎಂ.ಖಾನ್ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಅವರನ್ನು ಕುಲಸಚಿವರಾಗಿ ರಾಜ್ಯ ಸರ್ಕಾರ ನೇಮಿಸಿದ್ದರಿಂದ ಸರ್ಕಾರಕ್ಕೆ ಈ ಬಗ್ಗೆ ದೂರು ನೀಡುವ ನಿರ್ಣಯ ಕೈಗೊಳ್ಳಲಾಗಿದೆ.

    ವಜಾ 2ನೇ ಪ್ರಕರಣ: ಲೈಂಗಿಕ ಕಿರುಕುಳ ವಿಚಾರಕ್ಕೆ ಪ್ರಾಧ್ಯಾಪಕರೊಬ್ಬರು ವಜಾ ಆಗುತ್ತಿರುವ ಎರಡನೇ ಪ್ರಕರಣ ಇದಾಗಲಿದೆ. 10 ವರ್ಷ ಹಿಂದೆ ಪ್ರಕರಣವೊಂದರ ವಿಚಾರವಾಗಿ ಪ್ರೊ.ತಿಪ್ಪೇಸ್ವಾಮಿ ಎಂಬುವರ ಮೇಲೆ ವಿವಿ ಇದೇ ರೀತಿಯ ಕ್ರಮ ಕೈಗೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts