More

    ದಲಿತರ ಆಶಾಕಿರಣ ಪ್ರೊ.ಬಿ.ಕೃಷ್ಣಪ್ಪ

    ಮಾನ್ವಿ: ಸಾಮಾಜಿಕ ಚಿಂತನೆ ಹಾಗೂ ದೂರದೃಷ್ಟಿ ಪರಿಕಲ್ಪನೆಯೊಂದಿಗೆ ಪ್ರೊ.ಬಿ.ಕೃಷ್ಣಪ್ಪ ಶೋಷಿತ ಸಮುದಾಯದ ಧ್ವನಿಯಾಗಿದ್ದರು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕಪಗಲ್ ಹೇಳಿದರು.


    ಪಟ್ಟಣದ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 26ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೋಷಿತರ ಶ್ರೇಯಸ್ಸಿಗಾಗಿ ಪ್ರತ್ಯೇಕ ಸಂಘಟನೆ ಹುಟ್ಟು ಹಾಕಿದರು. ಜಾತಿ ವಿನಾಶ ವೇದಿಕೆಯಲ್ಲಿ ಕ್ರಿಯಾಶೀಲರಾಗಿ, ದಲಿತ ಸಂಘರ್ಷ ಸಮಿತಿ ಸ್ಥಾಪಿಸಿ ಡಾ.ಬಿ.ಆಂಬೇಡ್ಕರ್ ಅವರಂತೆ ಬಿ.ಕೃಷ್ಣಪ್ಪ ಕೂಡ ದಲಿತರ ಆಶಾಕಿರಣವಾಗಿದ್ದರು ಎಂದರು.


    ಪ್ರಮುಖರಾದ ಹನುಮಂತ ಕೋಟೆ, ಶಿವುಗೇನಿ ಬೈಲ್‌ಮರ್ಚಡ್, ಹನುಮಂತ್ರಾಯ ಕಪಗಲ್, ಚಂದ್ರಶೇಖರ ರಾಜೋಳ್ಳಿ, ಡಿ.ಹನುಮಂತ ಕಪಗಲ್, ಹನುಮಂತಪ್ಪ ಕೊಟ್ನೆಕಲ್, ಖಾಸಿಮಪ್ಪ ಸಂಗಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts