More

    ಭೂರಹಿತ ದಲಿತರಿಗೆ ಜಮೀನು ಮಂಜೂರು ಮಾಡಿ

    ಎನ್.ಆರ್.ಪುರ: ಭೂರಹಿತ ದಲಿತರಿಗೆ ಭೂಮಿ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

    ತಾಲೂಕಿನ ಕಸಬಾ ಹೋಬಳಿ, ರಾವೂರು ಗ್ರಾಮದ ಸ.ನಂ.157 ಹಾಗೂ 159ರಲ್ಲಿ ಶಿರಗಳಲೆ ಗ್ರಾಮ ಸ.ನಂ.127, ನಾಗಲಾಪುರ ಗ್ರಾಮ ಸ.ನಂ.28ರಲ್ಲಿ ಭೂಮಿ ಮಂಜೂರು ಮಾಡಿಕೊಡಲು ಹಾಗೂ ವಸತಿರಹಿತ ಬಾಳೆಹೊನ್ನೂರು ಹೋಬಳಿ ಎಂ.ವಿ.ಭವಾನಿ ಅವರಿಗೆ ನಿವೇಶನ ಮಂಜೂರಾತಿ ಮಾಡಿಕೊಡುವಂತೆ ಮನವಿ ಮಾಡಿದರು.
    ರಾವೂರು ಗ್ರಾಮ ಸ.ನಂ.157ರಲ್ಲಿ 10 ಎಕರೆ ಜಾಗ, ರಾವೂರು ಗ್ರಾಮ ಸ.ನಂ.159ರಲ್ಲಿ 15.06 ಎಕರೆ, ಶಿರಗಳಲೆ ಗ್ರಾಮದ ಸ.ನಂ.28ರಲ್ಲಿ 70 ಎಕರೆ ಜಮೀನನ್ನು ದಲಿತ ಸಂಘರ್ಷ ಸಮಿತಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಭೂರಹಿತ ದಲಿತರಿಗೆ ಸಾಗುವಳಿ ಪತ್ರ ನೀಡಲು ಕಡತ ತಯಾರಿಸಬೇಕು. ಕಡಹಿನಬೈಲು ಗ್ರಾಮ ಸ.ನಂ.39 ಮತ್ತು ಸ.ನಂ.40ರಲ್ಲಿ ಕಾಫಿ ತೋಟದ ಮಾಲೀಕರು ಮಾಡಿರುವ ಒತ್ತುವರಿ ತೆರವುಗೊಳಿಸಿದ್ದು, ಆ ಭೂಮಿಯಲ್ಲಿ ಅರಣ್ಯ ಇಲಾಖೆ ಭೂಮಿ ಹೊರತುಪಡಿಸಿ ಸರ್ಕಾರಿ ಜಮೀನನ್ನು ಭೂರಹಿತ ದಲಿತರಿಗೆ ಮಂಜೂರು ಮಾಡಿಕೊಡಬೇಕು. ಬಾಳೆಹೊನ್ನೂರು ಹೋಬಳಿ ಬಿ.ಕಣಬೂರು ಗ್ರಾಮದ ಪ.ಪಂಗಡದ ಎಂ.ವಿ.ಭವಾನಿ ವಸತಿ ರಹಿತರಾಗಿದ್ದು, ಅವರಿಗೆ ನಿವೇಶನ ಸಹಿತ ಮನೆ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು. ಮನವಿ ಪತ್ರವನ್ನು ಶಿರಸ್ತೇದಾರ್ ಇಫ್ತಿಕಾರ್ ಅವರಿಗೆ ಸಲ್ಲಿಸಿದರು.
    ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎನ್.ವೆಂಕಟೇಶ್, ಮಹಿಳಾ ಘಟಕದ ಸಂಚಾಲಕಿ ಎಂ.ವಿ.ಭವಾನಿ, ವಸಂತಕುಮಾರ್, ಅಬ್ದುಲ್ ರೆಹಮಾನ್, ಪಿ.ಮಂಜುನಾಥ್, ಜಾರ್ಜ್, ಸಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts