More

    ಪ್ರೊ. ಬಿ.ಕೃಷ್ಣಪ್ಪ ದಲಿತರ ಪಾಲಿನ ಆಶಾಕಿರಣ

    ಭದ್ರಾವತಿ: ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಹೆಜ್ಜೆಗಳು ಸಂಘಟನೆ ಸ್ಥಾಪನೆಯ ಮುನ್ನವೇ ಎಲ್ಲೆಡೆ ಪಸರಿಸಿತ್ತು ಎಂದು ಡಿಎಸ್‌ಎಸ್ ನ ಹಿರಿಯ ಮುಖಂಡ, ಕೃಷ್ಣಪ್ಪ ಸಮಕಾಲೀನ ಜಿ.ಮೂರ್ತಿ ಹೇಳಿದರು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಡಿಎಸ್‌ಎಸ್ ಸುವರ್ಣ ಮಹೋತ್ಸವದಲ್ಲಿ ಮಾತನಾಡಿ, ಕೃಷ್ಣಪ್ಪ ಮೂಲತಃ ಹರಿಹರದವರಾದರೂ ಅವರ ಎಲ್ಲ ಹೋರಾಟಗಳು ಭದ್ರಾವತಿಯಲ್ಲೇ ಕಾರ್ಯರೂಪಕ್ಕೆ ಬಂದವು. ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಅಸ್ಪಶ್ಯತೆಯ ವಿರುದ್ಧ ಹೋರಾಟ ಆರಂಭಿಸಿದ ಕೃಷ್ಣಪ್ಪ ದಲಿತ, ಹಿಂದುಳಿದವರ ಆಶಾಕಿರಣವಾಗಿದ್ದರು. ಅವರ ಸ್ವಂತ ನೆಲೆಗಟ್ಟಿನಲ್ಲಿ ನೂರಾರು ಹೋರಾಟಗಳು ನಡೆಯುತ್ತಿದ್ದವು ಎಂದರು.
    ಮುಖಂಡ ಭದ್ರಾವತಿ ಸತ್ಯ ಮಾತನಾಡಿ, 21 ಕಾರ್ಮಿಕರಿಂದ ಆರಂಭವಾದ ದಲಿತ ಸಂಘರ್ಷ ಸಮಿತಿಯು ಇಂದು ಸಾವಿರಾರು ಕಾರ್ಯಕರ್ತರನ್ನು ಹೊಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಚಳವಳಿಗಳನ್ನು ಆರಂಭಿಸಿದ ಬಿ.ಕೃಷ್ಣಪ್ಪ ದಲಿತರಿಗಾಗಿ ಹಲವಾರು ಕಾಯ್ದೆಗಳು ಜಾರಿಗೆ ಬರುವಲ್ಲಿ ಶ್ರಮವಹಿಸಿದ್ದರು. ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಗೆ ಕಡಿವಾಣ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
    ಡಿಎಸ್‌ಎಸ್ ಪದಾಧಿಕಾರಿಗಳು ನಗರದ ರಂಗಪ್ಪ ವೃತ್ತದಿಂದ ಮಾಧವಾಚಾರ್‌ವೃತ್ತ, ಹಾಲಪ್ಪ ವೃತ್ತದ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದವರೆಗೂ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾಜ್ಯದೆಲ್ಲೆಡೆ ನಡೆಯಲಿರುವ ಸುವರ್ಣ ಸಂಭ್ರಮಾಚರಣೆಗೆ ಅಧಿಕೃತ ಚಾಲನೆ ನೀಡಿದರು.
    ಶಾಸಕ ಬಿ.ಕೆ.ಸಂಗಮೇಶ್ವರ್, ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ, ಪ್ರಮುಖರಾದ ಈಶ್ವರಪ್ಪ, ನರಸಿಂಹ, ಕೃಷ್ಣಮೂರ್ತಿ, ರಂಗನಾಥ್, ತಿಪ್ಪೇಸ್ವಾಮಿ, ಉಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts