More

    ಕೊಟ್ಟ ಅಡ್ವಾನ್ಸ್ ಅನ್ನು ಸುದೀಪ್​​ ಇನ್ನೂ ನನಗೆ ಹಿಂದಿರುಗಿಸಿಲ್ಲ: ಕಿಚ್ಚನ ವಿರುದ್ಧ ‘ಹುಚ್ಚ’ ಚಿತ್ರದ ನಿರ್ಮಾಪಕ ಕಿಡಿ!

    ಬೆಂಗಳೂರು: ಕಳೆದ ಮೂರು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ನಟ ಕಿಚ್ಚ ಸುದೀಪ್​​ ಮತ್ತು ನಿರ್ಮಾಪಕ ಎನ್​​.ಕುಮಾರ್​​ ನಡುವೆ ಆರೋಪ-ಪ್ರತ್ಯಾರೋಪಗಳ ಜಟಾಪಟಿ ನಡೆಯುತ್ತಿದೆ. ಸದ್ಯ ಈ ವಿವಾದಕ್ಕೆ ಬ್ರೇಕ್​​ ಬೀಳುವ ಮುನ್ನವೇ ಹೊಸದೊಂದು ಟ್ವಿಸ್ಟ್​​​ ಸಿಕ್ಕಿದ್ದು, ಹುಚ್ಚ ಸಿನಿಮಾ ಸಮಯದಲ್ಲಿ ಕೊಟ್ಟ ಅಡ್ವಾನ್ಸ್​​ ನನಗೆ ಇಂದಿಗೂ ಸುದೀಪ್​​ ವಾಪಾಸ್​​ ಮಾಡಿಲ್ಲ ಎಂದು ಪ್ರೊಡ್ಯೂಸರ್​​ ರೆಹಮಾನ್​ ನೇರ ಆರೋಪ ಎಸಗಿದ್ದಾರೆ.

    ಇದನ್ನೂ ಓದಿ: ಆಟೋಟಗಳಿಂದ ಆರೋಗ್ಯಯುತ ಬದುಕು ಸಾಧ್ಯ: ಜ್ಯೋತಿ ಸೋಮಯ್ಯ

    ನಿರ್ಮಾಪಕ ಎಂ.ಎನ್​ ಕುಮಾರ್ ಮಾಡಿದ ಆರೋಪಕ್ಕೆ ನಟ ಸುದೀಪ್​ ಕಾನೂನು ಹೋರಾಟ ನಡೆಸುವ ಮುಖೇನ ತಿರುಗೇಟು ನೀಡಿದ್ದರು. ಆದ್ರೆ, ಈಗ ಕುಮಾರ್ ಅವರ​ ಪರವಾಗಿ ಹುಚ್ಚ ಸಿನಿಮಾದ ನಿರ್ಮಾಪಕ ರೆಹಮಾನ್​ ಸಾಥ್​ ನೀಡಿರುವುದು ಇದೀಗ ಅನುಮಾನಗಳಿಗೆ ಕಾರಣವಾಗಿದೆ.

    ನಿರ್ಮಾಪಕ ಎಂ.ಎನ್​ ಕುಮಾರ್​, ನಟ ಸುದೀಪ್​ ವಿರುದ್ಧ ಬರೋಬ್ಬರಿ 10 ಕೋಟಿ ಆರೋಪನ್ನು ಮಾಡಿದ್ದರು. ನನಗೆ ಸಿನಿಮಾ ಮಾಡುವುದಾಗಿ ಹೇಳಿ, ಬೇಕಾದಾಗ ಹಣವನ್ನು ತಮ್ಮ ಆಪ್ತರಿಗೆ ಕೊಡಿಸಿದ್ದಾರೆ. ಈಗ ಸಿನಿಮಾ ಮಾಡಿಕೊಡಿ ಅಂತಾ ಕೇಳಿದ್ರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಂತಾ ಕಳೆದ ವಾರ ಮಾಧ್ಯಮಗಳ ಮುಂದೆ ಆರೋಪವನ್ನು ಮಾಡಿದ್ದರು. ತಮ್ಮ ಮೇಲೆ ಸರಣಿ ಆರೋಪಗಳೂ ಕೇಳಿಬಂದ ಬೆನ್ನಲ್ಲೇ ಕಿಚ್ಚ ಸುದೀಪ್​ ಅವರು ಕುಮಾರ್​ ವಿರುದ್ಧ ಬರೋಬ್ಬರಿ 10 ಕೋಟಿ ಮಾನನಷ್ಟ ಮೊಕದ್ದೊಮ್ಮೆ ಹೂಡಿದ್ದಾರೆ.

    ಇದನ್ನೂ ಓದಿ: VIDEO | ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ವ್ಯಾಪಾರಿ ಮಾಡಿದ್ದೇನು?ನೋಡಿ…

    ಈ ವಿಷಯದ ಕುರಿತು ಕಿಚ್ಚ ಸುದೀಪ್​ ಕೂಡ ಮಾಧ್ಯಮಗಳಿಗೆ ಒಂದಿಷ್ಟು ವಿಷಯಗಳನ್ನು ತಲುಪಿಸಿದ್ದು, ತಮ್ಮ ಆಪ್ತ ಹಾಗೂ ನಿರ್ಮಾಪಕ ಜ್ಯಾಕ್​ ಮಂಜು ಮತ್ತು​ ಸುದೀಪ್​ ಮ್ಯಾನೇಜರ್​ ಚಕ್ರವರ್ತಿ ಚಂದ್ರಾಚೂಡ್​​ ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಂದು ಕುಮಾರ್​ ಮಾಡಿದ್ದ ಆರೋಪಗಳಿಗೆ ಯಾವುದೇ ಹುರುಳಿಲ್ಲ ಎಂದು ಹೇಳಿದರು.

    ಕುಮಾರ್​ ಮತ್ತು ಸುದೀಪ್​ ನಡುವಿನ ಜಟಾಪಟಿಯ ಮಧ್ಯೆ ‘ಹುಚ್ಚ’ ಸಿನಿಮಾದ ನಿರ್ಮಾಪಕ ರಹಮಾನ್​ ಕೂಡ ಸುದೀಪ್​​ ವಿರುದ್ಧ ಆರೋಪಿಸಿದ್ದಾರೆ. ಹುಚ್ಚ ಸಿನಿಮಾ ಮಾಡಿದ್ದು ನಾನು, ಆ ಸಿನಿಮಾದಿಂದಲೇ ಕಿಚ್ಚ ಅನ್ನೋ ಬಿರುದು ಬಂದಿದ್ದು. ಹಾಗಂತ ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದೊಮ್ಮೆ ಹಾಕಲು ಸಾಧ್ಯವೇ ಎಂದು ಹೇಳುವ ಮುಖೇನ ಸುದೀಪ್​ ವಿರುದ್ಧ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಕಠಾರದಹಳ್ಳಿ, ಕಂಚಿನಕಲ್‌ದುರ್ಗ, ಕಂಡರಕಸ್ಕೆ ಗ್ರಾಮಗಳಲ್ಲಿ ಕಾಡಾನೆ ದಾಳಿಗೆ ಬಾಳೆ, ಕಾಫಿನಾಶ

    ಇದೇ ವಿಚಾರವಾಗಿ ಸುದೀಪ್​ ಒಂದು ಮೆಸೇಜ್​​ ಕಳಿಸಿದ್ದಾರೆ. ನಾನು ಬೆಳೆದಿದ್ದೇ ಸಿನಿಮಾ ನಿರ್ಮಾಪಕರಿಂದ. 27 ವರ್ಷಗಳ ನನ್ನ ಸಿನಿಮಾ ಕೆರಿಯರ್​ನಲ್ಲಿ ಒಳಿತನ್ನೇ ಮಾಡಿದ್ದೇನೆ ಹೊರತು ಕೆಟ್ಟದನ್ನು ಮಾಡಿಲ್ಲ. ನನ್ನ ವಿರುದ್ಧ ಮಾಡಿದ ಆರೋಪಗಳಿಗೆ ನಾನು ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ. ನನಗೆ ಮಾತೃ ಸಂಸ್ಥೆ ಹಾಗೂ ಸಿನಿಮಾದ ಎಲ್ಲಾ ಅಂಗ ಸಂಸ್ಥೆಗಳ ಮೇಲೆ ನಂಬಿಕೆಯಿದೆ ಎಂದು ಪ್ರೆಸ್​ ನೋಟ್​​ವೊಂದನ್ನು​ ಬಿಡುಗಡೆ ಮಾಡಿದರು.

    ಸದ್ಯ ಕಿಚ್ಚ ಸುದೀಪ್​​ ಅವರು ನಿರ್ಮಾಪಕ ಎಂ.ಎನ್.​ ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅತ್ತ​ ಕುಮಾರ್​ ಅವರ ಮುಂದಿನ ಹೆಜ್ಜೆಯೇನು ಎಂಬುದು ಅಸ್ಪಷ್ಟವಾಗಿದ್ದು, ಇದು ಯಾವ ಹಂತಕ್ಕೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್‌ಗೆ ಶ್ರೀಲಂಕಾದಲ್ಲಿ ಹೃದಯಾಘಾತ; ಶೀಘ್ರದಲ್ಲೇ ನಾರಾಯಣ ಹೃದಯಾಲಯಕ್ಕೆ ಶಿಫ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts