More

    ಶಿವಾಜಿ ಮೂರ್ತಿ, ಕನ್ನಡಾಂಬೆಯ ಭಾವಚಿತ್ರ ಮೆರವಣಿಗೆ

    ರಟ್ಟಿಹಳ್ಳಿ: ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದನ್ನು ಸ್ವಾಗತಿಸಿ ತಾಲೂಕು ಮರಾಠ ಸಮಾಜ ಮತ್ತು ಕೆಲ ಕನ್ನಡ ಪರ ಸಂಘಟನೆಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಶಿವಾಜಿ ಮಹಾರಾಜರ ಮೂರ್ತಿ ಮತ್ತು ಕನ್ನಡಾಂಬೆಯ ಭಾವಚಿತ್ರ ಮೆರವಣಿಗೆ ಮಾಡಿದರು.

    ಮರಾಠ ಸಮಾಜದ ತಾಲೂಕು ಗೌರವಾಧ್ಯಕ್ಷ ರಾಮರಾವ್ ಕರಾತ್ ಮಾತನಾಡಿ, ಕನ್ನಡ ನಾಡು ನುಡಿ ಹೋರಾಟದಲ್ಲಿ ರಾಜ್ಯದ ಮರಾಠ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶದ ಗಡಿ ಸೇವೆಯಲ್ಲಿ ರಾಜ್ಯದ ಅನೇಕ ಮರಾಠ ಕನ್ನಡಿಗರು ಸೇವೆ ಸಲ್ಲಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಹುಟ್ಟಿ ಇಲ್ಲಿಯೇ ಕನ್ನಡಿಗರಾಗಿಯೇ ಬದುಕುತ್ತಿದ್ದೇವೆ. ಮರಾಠ ಸಮಾಜದ ಅಭಿವೃದ್ಧಿಗಾಗಿ ಸುಮಾರು ವರ್ಷಗಳಿಂದ ಸರ್ಕಾರಕ್ಕೆ ಅನೇಕ ಬೇಡಿಕೆ ಸಲ್ಲಿಸುತ್ತಾ ಬರಲಾಗಿದೆ. ಇದೀಗ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚಿಸಿ ಸಮಾಜದ ಆರ್ಥಿಕ, ಶೈಕ್ಷಣಿಕ, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ 50 ಕೋಟಿ ರೂ. ಮೀಸಲಿಟ್ಟಿರುವುದನ್ನು ಸ್ವಾಗತಿಸುತ್ತೇವೆ. ಸರ್ಕಾರದ ಈ ಕ್ರಮಕ್ಕೆ ನಮ್ಮ ಸಮಾಜದಿಂದ ಅಭಿನಂದಿಸುತ್ತೇವೆ ಎಂದರು.

    ಮರಾಠ ಸಮಾಜದ ತಾಲೂಕು ಅಧ್ಯಕ್ಷ ಕೆ.ವೈ. ಬಾಜೀರಾಯರ್ ಮಾತನಾಡಿ, ಸರ್ಕಾರ ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸುಮಾರು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ನಮ್ಮ ಬೇಡಿಕೆಯನ್ನು ಸರ್ಕಾರ ಶೀಘ್ರದಲ್ಲಿಯೇ ಈಡೇರಿಸುವ ಭರವಸೆ ಇದೆ ಎಂದರು.

    ಶಿವಾಜಿ ಮಹಾರಾಜರ ಮತ್ತು ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಬಿಎಸ್​ವೈ ಸರ್ಕಾರಕ್ಕೆ ಜಯಕಾರ ಕೂಗುತ್ತ ಸ್ಥಳೀಯ ಭಗತ್​ಸಿಂಗ್ ವೃತ್ತದಲ್ಲಿ ತಹಸೀಲ್ದಾರ್ ಕೆ.ಗುರುಬಸವರಾಜ ಮೂಲಕ ಸರ್ಕಾರಕ್ಕೆ ಅಭಿನಂದನಾ ಪತ್ರ ಸಲ್ಲಿಸಿದರು.

    ಸಮಾಜದ ಮುಖಂಡರಾದ ವಾಮನ್ ನಲವಾಡಿ, ಹನುಮಂತಪ್ಪ ಪವಾರ, ರಾಘವೇಂದ್ರ ಅಂಗಡಿ, ಮೈಲಾರಪ್ಪ ಎಳಿವಾಳ, ಪ್ರವೀಣ ಅಂಗಡಿ, ಗುರುರಾಜ ತಾಕಪ್ಪನವರ, ಕೃಷ್ಣೋಜಿರಾವ್, ಶಿವಾನಂದಪ್ಪ ಎರ್ರೇಸೀಮಿ, ಶಂಕ್ರಪ್ಪ ಮೂಲಿಮನಿ, ಮನೋಜ ಗೋಣೆಪ್ಪನವರ, ರಾಜು ಪವಾರ, ಬಸಪ್ಪ ಬಾಗೋಡಿ, ಯಲ್ಲಪ್ಪ ಜಾಧವ, ನಾರಾಯಣರಾವ ಸಾಳುಂಕೆ, ನರಸಿಂಹಪ್ಪ ಬೇವಿನಕಟ್ಟಿ, ಪ್ರವೀಣ ಜಿಮ್ಮೀದಾರ, ರವಿ ಮೂಲಿಮನಿ, ಶ್ರೀನಿವಾಸ ಭೈರಪ್ಪನವರ, ತಾನೋಜಿರಾವ್ ಅಂಗಡಿ, ನಿಂಗಪ್ಪ ಜಾಧವ, ಮಾರುತಿ ಜಾಧವ, ಸಂತೋಷ ಪವಾರ, ಅಜಪ್ಪ ಜಾಧವ, ಪಾಂಡುರಂಗ ಘೊರ್ಪಡೆ, ಆನಂದಪ್ಪ ಬಿಳಚಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts