More

    ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಸಮಸ್ಯೆ…

    ಬೆಂಗಳೂರು: ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ರಸ್ತೆಯಲ್ಲಿ ದಿನಕ್ಕೊಂದು ಸಮಸ್ಯೆ ಉಲ್ಬಣವಾಗಿ ವಾಹನ ಸವಾರರಿಗೆ ಕಿರಿಕಿರಿಯಾಗಿ ಪರದಾಡುವ ಪರಿಸ್ಥಿತಿ ಮತ್ತೆ ಮತ್ತೆ ಉದ್ಭವಿಸುತ್ತಲೇ ಇದೆ. ಇಷ್ಟು ದಿನ ಪ್ಲೈಓವರ್ ಬಂದ್ ಆಗಿತ್ತು. ಈಗ ಟೋಲ್​ ರಸ್ತೆ ಸಮಸ್ಯೆ ಉದ್ಭವಿಸಿದೆ.

    ಹೀಗೆ ನಾನಾ ಸಮಸ್ಯೆಗಳ ಸಾಗರದಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿಯಲ್ಲಿ ಬರುವ ಈ ಟೋಲ್ ರಸ್ತೆಯನ್ನು ಖಾಸಗಿ ಕಂಪನಿಯೊಂದು ನಿರ್ವಹಣೆ ಮಾಡುತ್ತಿದೆ. ಕೆಲ ತಿಂಗಳ ಹಿಂದೆ 8ನೇ ಮೈಲಿ ಬಳಿ ಪ್ಲೈಓವರ್ ನ ಪಿಲ್ಲರ್​ನಲ್ಲಿ ಸಮಸ್ಯೆಯಾಗಿ ಸಾಕಷ್ಟು ತಿಂಗಳ ಕಾಲ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು, ನಂತರ ಸರಿ ಪಡಿಸಿ ಟ್ರಾಫಿಕ್ ನಿಯಂತ್ರಣಿಸಲು ಹೆವಿ ವಾಹನಗಳಿಗೆ ಸಮಚಾರ ನಿರ್ಬಂಧಿಸಿ ಕೇವಲ ಲಘು ವಾಹನಗಳಿಗೆ ಅವಕಾಶ ನೀಡಲಾಗಿದೆ. ಆದರೆ ಈ ರಸ್ತೆ ಸಮಸ್ಯೆಗಳ ಸಾಗರವಾಗಿದೆ ಎಂದು ಪ್ರಯಾಣಿಕರೂ ಹೇಳುತ್ತಿದ್ದಾರೆ.

    ಈ ರಸ್ತೆಯ ಪ್ಲೈಓವರ್​ನಲ್ಲಿ ಈಗ ಗಿಡಗಂಟೆಗಳು ಬೆಳೆದಿದ್ದು ಹೀಗೆ ಮುಂದುವರೆದರೆ ಪಿಲ್ಲರ್ ಗಳಲ್ಲಿ ಬಿರುಕು ಬರುವ ಎಲ್ಲಾ ಸಾಧ್ಯತೆಗಳು ಇವೆ. ಇತ್ತ ಮಳೆಯ ನೀರನ್ನು ನಿಯಂತ್ರಿಸುವ ಪೈಪ್ ಲೈನ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವಾಗ ಸವಾರ ಮೇಲೆ ಬಿಳುತ್ತೊ ಎಂಬ ಆತಂಕ ಮನೆ ಮಾಡಿದೆ. ಇನ್ನೂ ರಾತ್ರಿಯಾದರೆ ಸಾಕು, ರಾಷ್ಟ್ರೀಯ ಹೆದ್ದಾರಿಯ ಈ ರಸ್ತೆಯಲ್ಲಿ ವಿದ್ಯುದ್ದೀಪಗಳ ಸಮಸ್ಯೆಯಿಂದ ಅಪಘಾತ, ದರೋಡೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗಿದೆ.

    ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಸಮಸ್ಯೆ…

    ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಸಮಸ್ಯೆ…

    ಒಟ್ಟಾರೆ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಟೋಲ್ ನಿರ್ವಹಣೆ ಮಾಡುವ ಕಂಪನಿಯಿಂದ ನಾನಾ ಸಮಸ್ಯೆಯನ್ನ ಸವಾರರು ಅನುಭವಿಸುವುದು ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಕಾಣಬಹುದಾಗಿದೆ. ಇನ್ನಾದರು ಸವಾರರ ಸುರಕ್ಷತೆಗೆ ಬಗ್ಗೆ ಸಂಬಂಧಿಸಿದವರು ಸೂಕ್ತ ಕ್ರಮ ವಹಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts