More

    ಏಕದಿನ ವಿಶ್ವಕಪ್‌ನಲ್ಲಿ ಏಷ್ಯನ್ನರ ಕಾದಾಟ: ಕಂಬ್ಯಾಕ್ ಮಾಡುವ ತವಕದಲ್ಲಿ ಲಂಕಾ

    ಹೈದರಾಬಾದ್: ಪ್ರಬಲ ಏಷ್ಯನ್ ಕ್ರಿಕೆಟ್ ತಂಡಗಳ ಸೆಣಸಾಟಕ್ಕೆ ರಾಜೀವ್ ಗಾಂಧಿ ಕ್ರೀಡಾಂಗಣ ಸಜ್ಜಾಗಿದ್ದು, ಆರಂಭಿಕ ಪಂದ್ಯದಲ್ಲಿ ನೆದರ್ಲೆಂಡ್ ಎದುರು ಪರದಾಡಿ ಗೆಲುವು ದಾಖಲಿಸಿರುವ ಪಾಕಿಸ್ತಾನ ಹಾಗೂ ಜರ್ಜರಿತ ಆರಂಭ ಕಂಡಿರುವ ಶ್ರೀಲಂಕಾ ತಂಡಗಳು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.
    ಏಷ್ಯಾಕಪ್ ೈನಲ್ ಸೋಲಿನ ಬಳಿಕ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಲಂಕಾದ ಬೌಲಿಂಗ್ ವಿಭಾಗವನ್ನು ದಕ್ಷಿಣ ಆಫ್ರಿಕಾ ಧೂಳೀಪಟಗೊಳಿಸಿತ್ತು. ಪ್ರಮುಖ ಬೌಲರ್‌ಗಳ ಗೈರಿನಲ್ಲಿ ಮಹೀಶ್ ತೀಕ್ಷಣ ಅನುಪಸ್ಥಿತಿ ತಂಡವನ್ನು ಹೆಚ್ಚು ಕಾಡಿತ್ತು. ತೀಕ್ಷಣ ಪಾಕ್ ಎದುರಿನ ಪಂದ್ಯಕ್ಕೆ ಫಿಟ್ ಆಗಲಿದ್ದಾರೆ ಎನ್ನಲಾಗಿದೆ. ಅನನುಭವಿ ಬೌಲರ್‌ಗಳನ್ನು ಹೊಂದಿರುವ ಲಂಕಾ ಟೂರ್ನಿಯಲ್ಲಿ ಕಂಬ್ಯಾಕ್ ಮಡುವ ತವಕದಲ್ಲಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸದೆಬಡಿದು ೈನಲ್‌ಗೇರಿದ ಲಂಕಾಗೆ ಈ ಬಾರಿ ತವರಿನ ಬೆಂಬಲವಿಲ್ಲ. ಕುಸಲ್ ಮೆಂಡಿಸ್, ಅಸಲಂಕಾ, ನಾಯಕ ಶನಕ ಾರ್ಮ್‌ನಲ್ಲಿರುವುದು ತಂಡಕ್ಕೆ ಬಲ ತುಂಬಿದೆ. 1996ರ ಚಾಂಪಿಯನ್ ಲಂಕಾ ಪುಟಿದೇಳಲು ಸಂಘಟಿತ ಪ್ರದರ್ಶನ ಅಗತ್ಯ.
    ಸ್ಪಿನ್ನರ್‌ಗಳ ಎದುರು ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಬಾಬರ್ ಅಜಮ್ ಪಡೆಗೆ ಮಹೀಶ್ ತೀಕ್ಷಣ ಮತ್ತು ಭರವಸೆಯ ದುನಿತ್ ವೆಲ್ಲಲಾಗೆ ಸವಾಲೊಡ್ಡಬಹುದು. ಆದರೆ ಕಳೆದ 10 ದಿನಗಳಿಂದ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನ ಕ್ರೀಡಾಂಗಣದ ಪರಿಸ್ಥಿತಿ ಅರಿತಿದೆ. ಆದರೆ ಆರಂಭಿಕರ ವೈಲ್ಯ ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಶಹೀನ್ ಷಾ ಅಫ್ರಿದಿ, ಹ್ಯಾರಿಸ್ ರ್ೌ ಪರಿಣಾಮಕಾರಿ ಬೌಲಿಂಗ್ ಲಂಕಾಗೆ ಸತ್ವಪರೀಕ್ಷೆಯಾಗಲಿದೆ.

    ವಿಶ್ವಕಪ್ ಮುಖಾಮುಖಿ
    ಪಾಕ್- 7
    ಲಂಕಾ-0
    ರದ್ದು-1

    ಏಕದಿನ ಮುಖಾಮುಖಿ
    ಪಾಕ್-92
    ಲಂಕಾ-59
    ಟೈ-1
    ಲಿತಾಂಶವಿಲ್ಲ-4

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts